December 22, 2024

Bhavana Tv

Its Your Channel

ಹೊಸ ವರ್ಷ ವಿನೂತನವಾಗಿ ಆಚರಿಸಿದ ಹಿರೇಗುತ್ತಿ ಯುವಕರು

ಕುಮಟಾ:- ಹೊಸ ವರ್ಷದ ಆಚರಣೆಯನ್ನು ಹಿರೇಗುತ್ತಿಯ ಮಕ್ಕಳಾದ ಕೃಷ್ಣ ಮುಕುಂದ ನಾಯಕ ( ಕಿಟ್ಟು). ಮಣಿಕಂಠ ಆರ್ ನಾಯಕ. ಮನೀಷ್ ರಮೇಶ ನಾಯಕ. ರತ್ವಿಕ ಉಲ್ಲಾಸ ನಾಯಕ. ದೇವನ ಕಮಲಾಕ್ಷ ಗಾಂವಕರ ಮಿತ್ರರು ಹೊನ್ನಾವರದ ಗುರುಕುಲ ಆಶ್ರಮ ಕ್ಕೆ ಹೋಗಿ ಆಶ್ರಮದ ಮಕ್ಕಳೊಂದಿಗೆ ಹೊಸ ವರ್ಷದ ನಿಮಿತ್ತ ಕೇಕ್ ಕಟ್ ಮಾಡಿ. ದೀಪ ಬೆಳಗಿಸಿ ಆ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ತಾವೇ ತಮ್ಮ ಕೈಯಾರೆ ಊಟವನ್ನು ನೀಡಿ ಅವರಿಗೆ ಮನಸ್ಸಿಗೆ ಮುದವನ್ನು ನೀಡಿ ಮನರಂಜನೆಯನ್ನು ನೀಡಿ ಹೊಸ ವರ್ಷವನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಹೊಸ ವರ್ಷವನ್ನು ಯುವಕರು ಈ ರೀತಿ ಆಚರಣೆ ಮಾಡಬಹುದೆಂಬುದನ್ನು ಇಂದಿನ ಯುವ ಪೀಳಿಗೆಗೆ ತೋರಿಸಿಕೊಟ್ಟಂತಹ ಹಿರೇಗುತ್ತಿಯ ಯುವಕರಿಗೆ ಹಿರೇಗುತ್ತಿ ಶ್ರೀ ಬ್ರಹ್ಮಜಟಗ ಯುವಕ ಸಂಘ ಹಾಗೂ ಗೆಳೆಯರ ಬಳಗ ಅಭಿನಂದಿಸಿದ್ದಾರೆ.

error: