December 22, 2024

Bhavana Tv

Its Your Channel

ವಿಕಲಚೇತನರಿಗೆ ದ್ವಿಚಕ್ರ ವಾಹನ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಿನಕರ ಶೆಟ್ಟಿಯವರು ಸೋಮವಾರ ಕುಮಟಾದ ಲೋಕೋಪಯೋಗಿ ಇಲಾಖೆಯ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ ಆವರಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ವಿಕಲಚೇತನರಿಗೆ ೨೦ ದ್ವಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಿದರು.

ವಿಕಲ ಚೇತನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ೩ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಒಟ್ಟು ೪ ಬ್ರೈಲ್ ಕಿಟ್ ಗಳು, ಇಲಾಖೆಯಿಂದ ಒಂದು ಹಾಗೂ ಶಾಸಕರ ನಿಧಿಯಿಂದ ಒಂದು ಒಟ್ಟು ಎರಡು ಟಾಕಿಂಗ್ ಲ್ಯಾಪ್ಟಾಪ್ ಗಳನ್ನು ಇದೇ ಸಂದರ್ಭದಲ್ಲಿ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಿ. ಡಿ. ಪಿ. ಓ. ಶ್ರೀಮತಿ ನಾಗರತ್ನಾ ನಾಯಕ, ಪುರಸಭಾ ಸದಸ್ಯರುಗಳಾದ ತುಳಸು ಗೌಡ ಮತ್ತು ಶ್ರೀಮತಿ ಪಲ್ಲವಿ ಮಡಿವಾಳ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುದರ್ಶನ ಎಸ್. ಹೊನ್ನಾವರ, ಪಕ್ಷದ ಪ್ರಮುಖರಾದ ಮಹೇಶ ನಾಯಕ ದೇವರಬಾವಿ, ಸಂದೀಪ್ ಅಗಸಾಲಿ ಮತ್ತಿತರರು ಇದ್ದರು.

ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ

error: