
ಕುಮಟಾ: ನಮ್ಮೆಲ್ಲರನ್ನು ಅಗಲಿದ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಾಗರಾಜ ಪಟಗಾರ ಅವರಿಗೆ ಮಾನ್ಯ ಶಾಸಕ ದಿನಕರ ಶೆಟ್ಟಿಯವರು ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಗೋಕರ್ಣ ಪೊಲೀಸ್ ಠಾಣೆಯ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಟಾ ತಾಲೂಕಿನ ಬಾಡದ ನಾಗರಾಜ್ ಪಟಗಾರ ಅವರು ಸುಮಾರು 26 ವರ್ಷಗಳ ಕಾಲ ಪೋಲೀಸ್ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ದಿನಾಂಕ:24/12/2022ರAದು ಕಾರ್ಯನಿಮಿತ್ತ ಕುಮಟಾದ ಕೋರ್ಟ್ ಗೆ ಬಂದಾಗ ಇವರಿಗೆ ಅಧಿಕ ರಕ್ತದೊತ್ತಡದಿಂದ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಉಂಟಾಗಿ ತಕ್ಷಣ ಉಡುಪಿಯ ಆದರ್ಶ ಹಾಸ್ಪಿಟಲ್ ಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 8 ಗಂಟೆಯ ಹೊತ್ತಿಗೆ ಕೊನೆಯುಸಿರೆಳೆದರು.
ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗಣ್ಯರು, ಹಾಗೂ ನಾಗರಾಜ ಪಟಗಾರ ಅವರ ಅಪಾರ ಸಂಖ್ಯೆಯ ಮಿತ್ರರು, ಬಂಧು ಬಳಗದವರು ಸಂತಾಪ ಸೂಚಿಸಿದರು. ನಿಜಕ್ಕೂ ಇವರ ಸಾವು ಪೋಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಸರಳ ವ್ಯಕ್ತಿತ್ವದ ನಾಗರಾಜ್ ಪಟಗಾರ ಅವರ ಕುಟುಂಬಕ್ಕೆ ದೇವರು ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ
ವರದಿ; ವಿಶ್ವನಾಥ ಜಿ ನಾಯ್ಕ ಕುಮಟಾ

More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ