April 3, 2025

Bhavana Tv

Its Your Channel

ಹೊನ್ನಾವರ ತಾಲೂಕಾ ಒಕ್ಕಲಿಗರ ಯುವ ವೇದಿಕೆಯಿಂದ 2023 ರ ವರ್ಷದ ಕ್ಯಾಲೆಂಡರ್ ಬಿಡುಗಡೆ

ಕುಮಟಾ ತಾಲೂಕಿನ ಒಕ್ಕಲಿಗರ ಶಾಖಾ ಮಠದಲ್ಲಿ, ಹೊನ್ನಾವರ ತಾಲೂಕಾ ಒಕ್ಕಲಿಗರ ಯುವ ವೇದಿಕೆಯ 2023 ರ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕುಮಟಾ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಗುರುಗಳು ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ನಿಶ್ಚಲಾನಂದನಾಥ ಗುರುಗಳು “ಇದು ಕೇವಲ ತೂಗು ಪಂಚಾAಗವಲ್ಲ. ಭಾವನಾತ್ಮಕ ಮತ್ತು ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ. ಮುಖ ಪುಟದಲ್ಲಿ ಗುರುಗಳ ಭಾವಚಿತ್ರ, ಹಾಗೂ ಉಳಿದ ಪುಟಗಳಲ್ಲಿ ಒಕ್ಕಲಿಗ ಸಮಾಜದಲ್ಲಿನ ಸರಕಾರಿ ನೌಕರರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಈ ವರ್ಣರಂಜಿತ ಕ್ಯಾಲೆಂಡರ್ ಯುವ ಪೀಳಿಗೆಗೆ ಪ್ರೇರಣೆಯಾಗಲಿ” ಎಂದು ಶುಭ ಹಾರೈಸಿದರು.

ಹೊನ್ನಾವರ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಶಂಕರ ಗೌಡ ಗುಣವಂತೆ ಮಾತನಾಡಿ “ಕಳೆದ ಆರು ವರ್ಷಗಳಿಂದ ಒಕ್ಕಲಿಗ ಯುವ ವೇದಿಕೆ ಹಮ್ಮಿಕೊಂಡಿರುವ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಈ ಕ್ಯಾಲೆಂಡರ್ ಬಿಡುಗಡೆಯು ಒಂದಾಗಿದೆ. ಸ್ವ-ಪ್ರಯತ್ನದ ಮೇಲೆ ಸಾಧನೆಯ ದಾರಿಯಲ್ಲಿ ಸಾಗಿದವರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ, ಸಮಾಜದ ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಪ್ರೇರಣೆ ಆಗಲಿ ಎನ್ನುವ ಉದ್ದೇಶ ಹೊಂದಿದ್ದೇವೆ” ಎಂದರು.

ಈ ಸಂದರ್ಭದಲ್ಲಿ ವಾಸು ಗೌಡ ತಲಗೋಡ, ಸುಬ್ರಾಯ ಗೌಡ ಕಳಸಿನಮೋಟೆ, ಜಗದೀಶ ಗೌಡ, ಸುರೇಶ್ ಗೌಡ, ಶೇಖರ್ ಗೌಡ ಉಪಸ್ಥಿತರಿದ್ದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: