December 22, 2024

Bhavana Tv

Its Your Channel

ಯಕ್ಷಗಾನ ಹಿರಿಯ ಕಲಾವಿದರಿಗೆ ‘ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ” ಹಾಗೂ ” ಕಲಾಗಂಗೋತ್ರಿ” ಪ್ರಶಸ್ತಿ ಪ್ರದಾನ.

ಕುಮಟಾ – ಯಕ್ಷಗಾನ ಹಿರಿಯ, ಅಶಕ್ತ ಕಲಾವಿದರಾದ ಹೆಗಡೆಯ ಮಾದೇವ ಪಟಗಾರ ಇವರಿಗೆ ಈ ವರ್ಷದ ದಿವಂಗತ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಹಾಗೂ ಹಿರಿಯ ಯಕ್ಷಗಾನ ಭಾಗವತರಾದ ಉಮೇಶ ಭಟ್ಟ ಬಾಡ ಇವರಿಗೆ ಕಲಾ ಗಂಗೋತ್ರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಲಾಗಂಗೋತ್ರಿ ಆಶ್ರಯದಲ್ಲಿ ಕುಮಟಾ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದಂತೆ ನಗರದ ಮಣಕಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳದ ವೇದಿಕೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಹಿರಿಯ ಭಾಗವತರು ಹಾಗೂ ಕಲಾಗಂಗೋತ್ರಿ ಪ್ರಶಸ್ತಿಗೆ ಭಾಜನರಾದ ಉಮೇಶ ಭಟ್ಟ ಬಾಡ ಇವರು ಯಕ್ಷಗಾನ ಕಲೆಯು ಅಪ್ಪಟ ಕನ್ನಡದ ಶ್ರೇಷ್ಠ ಕಲಾಪ್ರಕಾರವಾಗಿದ್ದು, ಇದರ ಪರಂಪರೆ, ಸಾಂಪ್ರದಾಯಿಕ ನೆಲೆಗಟ್ಟನ್ನು ಭದ್ರಪಡಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಇತ್ತೀಚೆಗೆ ಯಕ್ಷಗಾನ ಕಲೆಯನ್ನು ವ್ಯಾಪಾರೀಕರಣಗೊಳಿಸುತ್ತಿರುವ ಬಗ್ಗೆ ತುಂಬಾ ನೋವಾಗುತ್ತದೆ ಎಂದರು.ಅಧ್ಯಕ್ಷತೆಯನ್ನ ಕಲಾ ಗಂಗೋತ್ರಿ ಕುಮಟಾ ಅಧ್ಯಕ್ಷರಾದ ಗಣೇಶ ಭಟ್ ವಹಿಸಿದ್ದರು…………..
ಕಲಾಗಂಗೋತ್ರಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ ಎಂ.ಆರ್.ನಾಯಕ ಇವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ . ಪ್ರತಿವರ್ಷವೂ ಕಲಾ ಗಂಗೋತ್ರಿ ಯಿಂದ ಕುಮಟಾ ರಥಸಪ್ತಮಿ ಯಂದು ನಡೆಯುವ ..ಕಾರ್ಯಕ್ರಮದ ಆಶಯವನ್ನು ಸಭೆಗೆ ತಿಳಿಸಿದರು.
ಕಲಾಗಂಗೋತ್ರಿಯ ಗೌರವಾಧ್ಯಕ್ಷರಾದ ಶ್ರೀಧರ ನಾಯ್ಕ .. ಹಿಂದಿನಿAದಲೂ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ಕುಮಟಾದ ಜನ ಉತ್ತಮವಾಗಿ ಸ್ಪಂದಿಸುತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾದ ಉದ್ದಿಮೆದಾರರಾದ ರಾಧಾಕೃಷ್ಣ ನಾಯ್ಕ.ಕಲಾ ಗಂಗೋತ್ರಿ ಸಂಘದವರು ಯಾವಾಗಲೂ ಜನಮೆಚ್ಚುಗೆಯ ಕಾರ್ಯಕ್ರಮಗಳನ್ನೇ ಮಾಡುತ್ತಿದ್ದು ಆದರ್ಶವಾದಿ ಸಂಘಟನೆಯಾಗಿದ್ದು ತನಗೆ ಅತಿಥಿಯಾಗಿ ಕರೆದದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ನಿವೃತ್ತ ಅಧಿಕಾರಿಗಳಾದ .ಶ್ರೀ ಗಣಪತಿ ಆರ್ ಭಟ್ ಅವರು ಯಕ್ಷಗಾನದ ಉಳಿವೆಗಾಗಿ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ ವಾಗಿದೆ ಯೆಂದರು.. ಕಲಾ ಗಂಗೋತ್ರಿಯ ಪದಾಧಿಕಾರಿಗಳೆರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುರಸಭೆಯ ಸದಸ್ಯರಾದ ಎಂ.ಟಿ.ನಾಯ್ಕ ವಸಂತ ಪಂಡಿತ ಸನ್ಮಾನ ಪತ್ರ ವಾಚಿಸಿದರು.ರಾಮು ಅಡಿ ಧಾರೇಶ್ವರ ಇವರು ನಿರೂಪಿಸಿ, ವಂದಿಸಿದರು
ನAತರ ರಾಜಾ ರುದ್ರಕೋಪ, ಗದಾಯುದ್ಧ ಪೌರಾಣಿಕ ಪ್ರಸಂಗಗಳ ಉಚಿತ ಪ್ರದರ್ಶನಗಳು ನಡೆದವು. ಡಾ ಎಂ.ಆರ್. ನಾಯಕ ಇವರು ಕೌರವ ಪಾತ್ರ ನಿರ್ವಹಿಸಿ ಗಮನಸೆಳೆದರು.

error: