ಕುಮಟಾ ತಾಲೂಕಿನ ದಿವಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕಲಿಕಾ ಚೇತರಿಕೆ ವರ್ಷದ ಅಡಿಯಲ್ಲಿ “ಕಲಿಕಾ ಹಬ್ಬ” ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಶಾಲಾ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ. ಅದರಂತೆ ಕಲಿಕಾ ಹಬ್ಬದ ಹಿನ್ನೆಲೆಯಲ್ಲಿ ಶಾಲೆಯನ್ನು ಹೂವು, ಬಾಳೆ ಗಿಡ, ತಳಿರು ತೋರಣ, ಬಲೂನು, ಪೇಪರ್ ಕಟಿಂಗ್ಸ್?ಗಳಿAದ ಸಿಂಗರಿಸಲಾಗಿತ್ತು. ಅಥಿತಿಗಳು, ವಿದ್ಯಾರ್ಥಿಗಳ ತಲೆಗಳ ಮೇಲೆ ಕಲರ್ ಕಲರ್ ಪೇಪರ್ ಟೋಪಿ, ಆಕರ್ಷಕ ವೇಷಭೂಷಣ, ವಾದ್ಯಘೋಷ, ಮೆರವಣಿಗೆ ಇವೆಲ್ಲವೂ ಕಲಿಕಾ ಹಬ್ಬದ ಸಂಭ್ರಮಕೆ ಸಾಕ್ಷಿಯಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ‘ಕಲಿಕಾ ಹಬ್ಬ’ ಕಾರ್ಯಕ್ರಮಕೆ ಚಾಲನೆ ನೀಡಿ ಶುಭ ಹಾರೈಸಿದರು. ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಗಳ ಆಯ್ಕೆಯ ವಿದ್ಯಾರ್ಥಿಗಳು, ಕಲಿಕಾ ಹಬ್ಬದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಸುಗ್ಗಿಕುಣಿತ, ಚದ್ಮವೇಶ, ಯಕ್ಷಗಾನ ನೃತ್ಯ ಎಲ್ಲರ ಗಮನ ಸೆಳೆಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಇವರ ಗಾಯನಕ್ಕೆ ಪೂರಕವಾಗಿ ಸಾಥಿವಾದನದಲ್ಲಿ ‘ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ವಿಜಯ ಮಹಲೆ ಸಂಗಡಿಗರು ಸಹಕರಿಸಿದರು.
ಒಟ್ಟಾರೆ ಶಾಲಾ ಮಕ್ಕಳು ಸಡಗರದಿಂದ ಕಲಿಕೆಯೆಡೆಗೆ ಆಕರ್ಷಿತರಾಗುವಂತೆ ಮಾಡುವಲ್ಲಿ ಈ ಕಲಿಕಾ ಹಬ್ಬ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಮುಖ್ಯಧ್ಯಾಪಕ ಮಂಜುನಾಥ ಮುಕ್ರಿ, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಯವರು, ಶಿಕ್ಷಣ ಇಲಾಖೆಯವರು, ಊರನಾಗರಿಕರು ಹಾಜರಿದ್ದರು.
ವರದಿ: ನರಸಿಂಹ ನಾಯ್ಕ್ ಹರಡಸೆ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ