December 22, 2024

Bhavana Tv

Its Your Channel

ಕುಮಟಾ ದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ!

ಕುಮಟಾ: ಮಾರ್ಚ್ 12 ರಂದು ಕುಮಟಾ ದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ಹಿಂದೂರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು. ಸಭೆಯ ವಕ್ತಾರರಾಗಿ ಹಿಂದೂ ಜನಜಾಗೃತಿ ಸಮಿತಿಯ ಉತ್ತರಕನ್ನಡ ಜಿಲ್ಲಾ ಸಮನ್ವಯಕರಾದ ಶರತಕುಮಾರ ನಾಯ್ಕ್ ಹಾಗೂ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿಯಾದ ವಿಠ್ಠಲ ಪೈ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಠ್ಠಲ ಪೈ ಅವರು ಮಾತನಾಡುತ್ತ ಇಂದು ನಮ್ಮ ರಾಷ್ಟ್ರಪುರುಷರ ಬಲಿದಾನ ವ್ಯರ್ಥ ಮಾಡದೆ ದೇಶದ ಮತ್ತು ಧರ್ಮದ ರಕ್ಷಣೆಗಾಗಿ ಹೊರಡಬೇಕಿದೆ. ನಾವೆಲ್ಲರೂ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಟ್ಟುಕೊಂಡು ಪ್ರಯತ್ನ ಮಾಡಬೇಕಿದೆ. ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಯ ಬಗ್ಗೆ ಗೌರವ ಇಟ್ಟುಕೊಂಡು ಹಿಂದೂರಾಷ್ಟ್ರ ಸ್ಥಾಪನೆ ಗಾಗಿ ಪ್ರತಿಜ್ಞೆ ಮಾಡಬೇಕು ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಶರತಕುಮಾರ ನಾಯ್ಕ್ ಮಾತನಾಡುತ್ತ ಹಿಂದೂಗಳು ಧರ್ಮ ಶಿಕ್ಷಣದ ಅಭಾವದಿಂದಾಗಿ ಆತ್ಮಬಲವನ್ನು ವೃದ್ಧಿಮಾಡುವಲ್ಲಿ ವಂಚಿತರಾಗಿ ವೈಯಕ್ತಿಕ ಜೀವನದಲ್ಲಿ ಮತ್ತು ರಾಷ್ಟ್ರೀಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರೋಪಾಯವಾಗಿ ಪ್ರತಿಯೊಬ್ಬ ಹಿಂದೂಗಳು ಧಾರ್ಮಿಕ ಶಿಕ್ಷಣ ಪಡೆದುಕೊಂಡು ಯೋಗ್ಯ ಧರ್ಮಚರಣೆಯನ್ನು ಮಾಡಬೇಕು ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಕುಮಟಾ ದ ಬೇರೆ ಬೇರೆ ಭಾಗಗಳಿಂದ ಹಿಂದೂಗಳು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಭಟ್ಕಳ ಸಮಿತಿ ಕಾರ್ಯಕರ್ತರಾದ ಶ್ರೀ ಸಂತೋಷ್ ಭಟ್ಕಳ ಅವರು ಮಾಡಿದರು.
ಕಾರ್ಯಕ್ರಮದ ಸೂತ್ರಸಂಚಲನೆಯನ್ನು ಕು. ಸುನಿತಾ ಅಳ್ಳಿಕಟ್ಟೆ ಅವರು ಮಾಡಿಕೊಟ್ಟರು.

error: