ಕುಮಟಾ ; ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದೂ ಪರ ಪ್ರಮುಖ ವಕೀಲರಾದ ಪಿ. ಕೃಷ್ಣಮೂರ್ತಿ ಅವರ ಮೇಲೆ ಮಡಿಕೇರಿಯಲ್ಲಿ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ವಕೀಲ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರ್ ನಲ್ಲಿ ಹಿಂತಿರುಗುವಾಗ ಕರ್ನಾಟಕದ ಚೆಟ್ಟಳ್ಳಿಯಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಈ ಹೇಡಿತನದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ಖಂಡಿಸುತ್ತದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಹಿಂದೂ ಪರ ವಕೀಲರ ಮೇಲೆ ನಡೆದಿರುವ ದಾಳಿ ಅತ್ಯಂತ ಗಂಭೀರವಾಗಿದೆ. ಇದರ ಹಿಂದೆ ಅರ್ಬನ್ ನಕ್ಸಲರ ಕೈವಾಡ ಇರುವ ಸಾದ್ಯತೆ ಇದೆ. ಈ ಪ್ರಕರಣದಲ್ಲಿ ವಕೀಲರ ಮೇಲೆ ಒತ್ತಡ ಹೇರಲು ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ದಾಳಿಯಲ್ಲಿ ವಕೀಲ ಕೃಷ್ಣಮೂರ್ತಿ ಬದುಕುಳಿದಿದ್ದರೂ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರಿಗೆ ಸಶಸ್ತ್ರ ಪೊಲೀಸ್ ರಕ್ಷಣೆಯನ್ನು ನೀಡಬೇಕು. ಈ ಹೇಡಿತನದ ದಾಳಿಯ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯಂತಹ ಭಯೋತ್ಪಾಧಕ ಜಿಹಾದಿ ಸಂಘಟನೆ ಅಥವಾ ಗೌರಿ ಲಂಕೇಶ್ ಅವರನ್ನು ಬೆಂಬಲಿಸುವ ಅರ್ಬನ್ ನಕ್ಸಲಿಸ್ಟ್ಗಳು ಯಾರು ಎಂಬುದನ್ನು ತನಿಖೆ ಮಾಡುವುದು ಅನಿವಾರ್ಯವಾಗಿದೆ.
ವಕೀಲರಾದ ಕೃಷ್ಣಮೂರ್ತಿ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಅವರು ಹಿಂದೂ ಧರ್ಮದ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಹಾಗಾಗಿ ಈ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಹೆಚ್ಚಿದೆ. ಈ ದಾಳಿ ಹಿಂದುತ್ವದ ಮೇಲಿನ ದಾಳಿಯಾಗಿದೆ. ಈ ಸಂಘಟಿತ ಅಪರಾಧವನ್ನು ಭೇದಿಸಿ ಇದರ ಹಿಂದಿರುವ ಸೂತ್ರಧಾರನನ್ನು ಪತ್ತೆ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಕರ್ನಾಟಕವು ಈ ಹಿಂದೆ ಹಿಂದೂಪರ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ಕಂಡಿದೆ, ಅನೇಕರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತಿರುವ ಈ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕುಮಟಾ ದ ಸಹಾಯಕ ಆಯುಕ್ತರ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿಯನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಉತ್ತರಕನ್ನಡ ಕೋಶಾಧ್ಯಕ್ಷರಾದ ಶ್ರೀ ಎಂ ಆರ್ ಭಟ್, ಹಿಂದುತ್ವನಿಷ್ಟರಾದ ಶ್ರೀ ನಾಗೇಂದ್ರ ಆಚಾರಿ, ಶ್ರೀ ಚೈತನ್ಯ ಆಚಾರಿ, ಶ್ರೀ ಅಶೋಕ್ ಆಚಾರಿ, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಶರತ್ ಕುಮಾರ್ ನಾಯ್ಕ್, ಶ್ರೀ ಸಂದೀಪ್ ಭಂಡಾರಿ, ಶ್ರೀ ಅರುಣ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ