September 16, 2024

Bhavana Tv

Its Your Channel

ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಗಿಬ್ ಸರ್ಕಲ್ ಹತ್ತಿರ ಇರುವ ಬಸ್ ತಂಗುದಾಣ ಸ್ವಚ್ಚ್

ಕುಮಟಾ : ಇಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಗಿಬ್ ಸರ್ಕಲ್ ಹತ್ತಿರ ಇರುವ ಬಸ್ ತಂಗುದಾಣಕ್ಕೆ ಹಚ್ಚಿರುವ ಬಿತ್ತಿಪತ್ರಗಳನ್ನು ತೆಗೆದು ಬಣ್ಣವನ್ನು ಬಳಿದು ಸ್ವಚ್ಚಮಾಡಿದ ನಂತರ ಅಲ್ಲೆ ಇರುವ ಕುಡಿಯುವ ನೀರಿನ ಟ್ಯಾಂಕ ಕಟ್ಟಡವನ್ನು ಸ್ವಚ್ಚಗೊಳಿಸಲಾಯಿತು. ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಆಗಮಿಸಿದ್ದು ಕೆಲಸದ ಕುರಿತು ಸಂತಸ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕ ಸಂಚಾಲಕರಾದ ಪ್ರಕಾಶ ನಾಯ್ಕ, ಸದಸ್ಯರಾದ ಮಾರುತಿ ಪಟಗಾರ, ರಾಘವೇಂದ್ರ ಗಾಡಿಗ, ಗಣಪತಿ ಪಟಗಾರ, ಗೌರೀಶ ನಾಯ್ಕ, ಅಮಿತ ಪಟಗಾರ, ಸಂದೀಪ ಮಡಿವಾಳ, ಗಿರೀಶ ಪಟಗಾರ, ಕಿರಣ ಕಡೆಮನೆ, ಸಚೀನ ಭಂಡಾರಿ, ಚೀದಾನಂದ ಅಂಬಿಗ, ಅಣ್ಣಪ್ಪ ನಾಯ್ಕ ಹಾಜರಿದ್ದರು.

error: