ಕುಮಟಾ : ಆಟೋ ಚಾಲಕರ ಪಾಲಿಗೆ ಆಶಾಕಿರಣವಾದ ಅನಂತಮೂರ್ತಿ ಹೆಗಡೆಯವರು ಡಾ.ಪುನೀತ ರಾಜಕುಮಾರ ಅಭಿಮಾನಿ, ಅವರ ಅದರ್ಶದಂತೆ ಅವರ ಹಾದಿಯಲ್ಲೇ ನಡೆದು ದಾನ ಧರ್ಮಕ್ಕೆ ಮುಂದಾಗಿದ್ದಾರೆ,
ಸಿರ್ಸಿ, ಕುಮಟಾ, ಯಲ್ಲಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಬಡವರು, ನಿರ್ಗತಿಕರು, ಆಟೋ ಚಾಲಕರಿಗೆ ನಿರಂತರವಾಗಿ ನೆರವು ನೀಡುತ್ತ ಜಿಲ್ಲೆಯ ಆಟೋ ಚಾಲಕರಿಂದ ಬಡವರ ಬಂದು, ಆಟೊ ರಕ್ಷಕ ಬಿರುದು ಪಡೆದಿರುವ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಇದೀಗ ಕುಮಟಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕೊಡುಗೆಯಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ನೀಡುತ್ತಿದ್ದಾರೆ.
ಪ್ರತಿ ನಿತ್ಯ ನೂರಾರು ಜನರು ಕುಮಟಾ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ, ಅವರಿಗೆ ಕುಡಿಯಲು ಶುದ್ದ ನೀರಿನ ಅವಶ್ಯಕತೆ ಇರುವುದನ್ನು ಮನಗಂಡು ಸಂಸ್ಥೆ ಉಚಿತ ಶುದ್ಧ ನೀರಿನ ಘಟಕವನ್ನು ನೀಡಲು ನಿರ್ದರಿಸಿದೆ.
ಇದರ ಉದ್ಘಾಟಣಾ ಸಮಾರಂಭ ದಿನಾಂಕ 7-9-2023 ಗುರುವಾರ ಬೆಳಿಗ್ಗೆ 10 ಘಂಟೆಗೆ ಕುಮಟಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಉದ್ಘಾಟಕರಾಗಿ ಶ್ರೀ ದಿನಕರ ಶೆಟ್ಟಿ ಶಾಸಕರು ಕುಮಟಾ, ಅಧ್ಯಕ್ಷತೆ ಶ್ರೀ ಅನಂತಮೂರ್ತಿ ಹೆಗಡೆ, ಅಧ್ಯಕ್ಷರು ಅನಂತಮೂರ್ತಿ ಚಾರಿಟೇಬಲ್ ಟ್ರಷ್ಟ ಶಿರಸಿ, ಶ್ರೀ ವಿನೋದ ಪ್ರಭು, ವೆಂಕಟೇಶ ನಾಯ್ಕ, ಡಾ|| ಜಿ.ಜಿ. ಹೆಗಡೆ, ಶ್ರೀ ಆರ್.ಜಿ.ನಾಯ್ಕ ವಕೀಲರು, ಶ್ರೀ ಕುಮಾರ ಮಾರ್ಕಾಂಡೆ ಉಪಸ್ಥಿತರಿರಲಿದ್ದಾರೆ.
ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಟ್ರಷ್ಟನ ಸಂಚಾಲಕರಾದ ಸಂತೋಷ ನಾಯ್ಕ ಬ್ಯಾಗದ್ದೆ ವಿನಂತಿಸಿದ್ದಾರೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ