May 5, 2024

Bhavana Tv

Its Your Channel

ಆರ್.ಎನ್.ಎಸ್. ನರ್ಸಿಂಗ್ ಕಾಲೇಜು ಮುರ್ಡೇಶ್ವರದಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ

ಭಟ್ಕಳ: ಆರ್.ಎನ್.ಎಸ್. ನರ್ಸಿಂಗ್ ಕಾಲೇಜು ಮುರ್ಡೇಶ್ವರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಆರ್.ಎನ್.ಎಸ್. ನರ್ಸಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯನ್ನು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಉದ್ಘಾಟಿಸಿದರು.

ನಂತರ ಪ್ರಾಜೆಕ್ಟರ್ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ತಾಯಿಯ ಹೊಟ್ಟೆಯಲ್ಲಿ ಹಂತ ಹಂತವಾಗಿ ಹೆಣ್ಣೂ ಮಗುವಿನ ಬೆಳವಣಿಗೆ, ಸ್ಕಾನಿಂಗ್, ಗರ್ಭಪಾತದ ಕುರಿತು ವಿವರಿಸಿದರು. ನಂತರ ಮಾತನಾಡಿದ ಅವರು ಹೆಣ್ಣು ಭ್ರೂಣ ಪತ್ತೆ ಕಾರ್ಯವು ಅಪರಾಧವಾಗಿದ್ದು ಸರಕಾರ ಅದನ್ನು ನಿಷೇಧಿಸಿದೆ. ಒಂದು ಹೆಣ್ಣು ಮಗು ಮನೆಯಲ್ಲಿ ಬೆಳವಣಿಗೆಯನ್ನು ಹೊಂದುತ್ತಾ ಹೇಗೆ ಸಮಾಜ ಮುಖಿಯಾಗುತ್ತಾಳೆ ಎನ್ನುವುದನ್ನು ವಿವರಿಸಿದ ಅವರು ಹೆಣ್ಣು ಸಮಾಜದ ಕಣ್ಣು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ಎನ್. ಎಸ್. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಮ್ಯ ಜಾರ್ಜ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಒಂದು ಹೆಣ್ಣು ಮಗುವಿಗೆ ಕಾನೂನಿನಲ್ಲಿ ಏನೆಲ್ಲಾ ಹಕ್ಕುಗಳಿವೆ. ಹೆಣ್ಣು ಮಗು ಹುಟ್ಟುವುದಕ್ಕೂ ಪೂರ್ವದಿಂದ ಅವಳು ಬೆಳೆದು ದೊಡ್ಡವಳಾಗುವ ತನಕ ಹಾಗೂ ಸಮಾಜದಲ್ಲಿ ಅವರ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿಯೂ ಕೂಡಾ ಅವಳಿಗೆ ಕಾನೂನಿನ ಪ್ರಕಾರ ಏನೇನು ಹಕ್ಕುಗಳಿವೆ ಎನ್ನುವುದನ್ನು ತಿಳಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಅನಾಜ್ ಬಿಬಿ ಸ್ವಾಗತಿಸಿದರು. ದಿವ್ಯಾ ಗೌಡ ನಿರೂಪಿಸಿದರು. ಆದಿತ್ಯ ಎಸ್. ಕುಮಾರ್ ವಂದಿಸಿದರು.

error: