May 5, 2024

Bhavana Tv

Its Your Channel

ಬೀನಾ ವೈದ್ಯ ಸಂಸ್ಥೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಮುರ್ಡೇಶ್ವರ:- ಬೀನಾ ವೈದ್ಯ ಸಂಸ್ಥೆಯಲ್ಲಿ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ“ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸವಿತಾ ದೇವಾಡಿಗ ವಲಯ ಭಟ್ಕಳ ಅರಣ್ಯಾಧಿಕಾರಿಗಳು, ಆಗಮಿಸಿದ್ದರು. ಹೆಣ್ಣು ಮಕ್ಕಳ ದಿನಾಚರಣೆಯ ಕುರಿತು ಮಾತನಾಡುತ್ತ ಪ್ರತಿಯೊಂದು ಹೆಣ್ಣು ಮಗು ತನ್ನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ನಂತರ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿಯಾದ ಪುಷ್ಪಲತಾ ವೈದ್ಯರವರು ಮಾತನಾಡುತ್ತಾ ಹಲವಾರು ಸಾಧಕಿಯರ ಸಾಧನೆಯ ಹಾದಿಯ ಬಗ್ಗೆ ವಿವರಿಸುತ್ತಾ ಶಕ್ತಿ, ತಾಳ್ಮೆ ಸಹನೆ, ಪ್ರೀತಿ, ಸಮರ್ಪಣೆ, ಭರವಸೆ, ಪ್ರೋತ್ಸಾಹಿಸುವಿಕೆ, ಹಂಚಿಕೊಳ್ಳುವಿಕೆ, ಕಾಳಜಿ, ಹುಟ್ಟು, ತಾಯ್ತನ, ಕ್ಷಮಾಗುಣ, ಸಾಧನೆ, ಕರುಣೆ, ಇದೇ ಹೆಣ್ಣಿನ ಮೂಲ ತತ್ವ ಇದೆಲ್ಲದರ ಒಗ್ಗೂಡಿಕೆಯೇ ಹೆಣ್ಣು. ಪ್ರತಿಯೊಂದು ಹೆಣ್ಣಿನಲ್ಲಿಯೂ ವಿಶಿಷ್ಟವಾದ ಶಕ್ತಿ ಅಡಗಿರುತ್ತದೆ, ಅದನ್ನು ಗುರುತಿಸುವಿಕೆ ಸಮಾಜದಿಂದ ಆಗಬೇಕಾಗಿದೆ. ಹೆಣ್ಣಿನ ಸಾಧನೆಗೆ ಬೇಕಾದ ಸಮಾನವಾದ ಅವಕಾಶಗಳನ್ನು ಕಲ್ಪಿಸುವ, ಪ್ರೋತ್ಸಾಹಿಸುವ ಜವಬ್ದಾರಿ ಕುಟುಂಬದವರದ್ದಾಗಿರಬೇಕು.
ಜೀವಕ್ಕೆ ನೀರು ಎಷ್ಟು ಮುಖ್ಯವೋ ಜೀವನಕ್ಕೇ ಹೆಣ್ಣು ಅಷ್ಟೇ ಮುಖ್ಯ “ತೂಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲದು” ಎಂಬುದನ್ನು ಸಮರ್ಥವಾಗಿ ವಿದ್ಯಾರ್ಥಿಗಳಿಗೆ ಅರ್ಥೈಸಿಕೊಟ್ಟು, ವಿದ್ಯಾರ್ಥಿಗಳಿಗೆ ಸ್ಪೂರ್ತಿ ಧೈರ್ಯ ಆತ್ಮ ವಿಶ್ವಾಸ ತುಂಬಿ ಮುಂದಿನ ಸಾಧನೆಗೆ ಶುಭಾಶಯಗಳನ್ನು ಕೋರಿದರು.
ಹೆಣ್ಣು ವiಕ್ಕಳ ಸಾಧನೆಗೆ ಸಂಭAದಿಸಿದAತೆ ಹಲವಾರು ಸಾಕ್ಷö್ಯ ಚಿತ್ರಗಳನ್ನು ಕಾರ್ಯಕ್ರಮದಲ್ಲಿ ತೋರಿಸಿದರು. ಉಪನ್ಯಾಸಕಿಯಾದ ಉಷಾ ನಾಯ್ಕ ಮತ್ತು ದ್ವೀತಿಯ ಪಿ.ಯು. ವಿರ್ದ್ಯಾಥಿನಿ ಸಂಜನಾ ನಾಯ್ಕ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಉಪನ್ಯಾಸಕಿ ಹೇಮಾವತಿ ನಾಯ್ಕ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಹಿಂದಿ ಉಪನ್ಯಾಸಕಿ ಸಂಗೀತ ನಾಯ್ಕ ರವರು ಅಥಿತಿಗಳಿಗೆ ವಂದನಾರ್ಪಣೆ ಸಲ್ಲಿಸಿದರು.

error: