
ಮುರ್ಡೇಶ್ವರ :-ಗೀತಾ ಹಾಗೂ ಉದಯ ನಾರಾಯಣ ಶೆಟ್ಟಿ ಮುರ್ಡೇಶ್ವರ ಇವರ ಮಗಳಾದ ಕುಮಾರಿ ನಮೃತಾ ಇವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಿನ್ನೆ ನಡೆದ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ ಗೆಹ್ಲೊಟ್ ಇವರಿಂದ ಎಂ.ಎಸ್ಸಿ ಬೊಟನಿ ವಿಷಯದಲ್ಲಿ ( ಸಸ್ಯ ಶಾಸ್ತ್ರ ವಿಷಯದಲ್ಲಿ ) 5 ಬಂಗಾರದ ಪದಕವನ್ನು ಪಡೆದುಕೊಂಡರು

ನಮೃತಾ ಇವರು ಮುರ್ಡೇಶ್ವರದ ಆರ್ ಎನ್ ಎಸ್ ವಿದ್ಯಾನಿಕೇತನದಲ್ಲಿ ಎಸ್ ಎಸ್ ಎಲ್ ಸಿ, ಪದವಿ ಪೂರ್ವ ವ್ಯಾಸಂಗ ಮಾಡಿ ಹೊನ್ನಾವರದ ಎಸ್ ಡಿ ಎಮ್ ಮಹಾವಿದ್ಯಾಲಯದಲ್ಲಿ ಬಿ ಎಸ್ ಸಿ ಪದವಿ ಪಡೆದಿರುತ್ತಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ನಮೃತಾ ಇವರಿಗೆ ತಾಲೂಕು ಗಾಣಿಗ ಸೇವಾಸಂಘದ ಪರವಾಗಿ ಶ್ರೀಧರ ಶೆಟ್ಟಿ ಸುಭಾಷ್ ಶೆಟ್ಟಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಪರಿಷತ ಸದಸ್ಯರಾದ ಪ್ರಕಾಶ ಶಿರಾಲಿ ಗಜಾನನ ಶೆಟ್ಟಿ ಎಂ ಆರ್ ಮುರ್ಡೇಶರ ಉಪನ್ಯಾಸಕರಾದ ರಾಜೇಶ ಶೆಟ್ಟಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: