May 8, 2024

Bhavana Tv

Its Your Channel

ಪ್ರವಾಸಿತಾಣ ಮುರ್ಡೇಶ್ವರದಲ್ಲಿ ರಾತ್ರಿ ಹೊತ್ತಲ್ಲಿ ವಾಹನ ಇಡಲು ಪರದಾಡುತ್ತಿರುವ ಪ್ರವಾಸಿಗರು

ಭಟ್ಕಳ: ರಾಜ್ಯದ ಪ್ರಸಿದ್ದ ಪ್ರವಾಸಿತಾಣ ಮುರ್ಡೇಶ್ವರದಲ್ಲಿ ಭಕ್ತರಿಗೆ ಕೇಳೊರಿಲ್ಲಾ… ರಾತ್ರಿ ಆಯ್ತು ಅಂದರೆ ಅವರು ಪಡೊ ಕಷ್ಟ ಮಾತ್ರ ಯಾರಿಗೂ.. ತಿಳಿಯುತ್ತಿಲ್ಲ. ಸಾಮಾನ್ಯವಾಗಿ ರಜಾದಿನಗಳಲ್ಲಿ ಪ್ರವಾಸಿಗರ ದಂಡೆ ಇಲ್ಲಿಗೆ ಹರಿದು ಬರುತ್ತಿದ್ದು ರಾತ್ರಿ ಹೊತ್ತಲ್ಲಿ ಪ್ರವಾಸಿಗರು ವಾಹನ ಇಡಲು ಪರದಾಡುತ್ತಿದ್ದಾರೆ.

ತಾಲೂಕಿನ ಮುರ್ಡೇಶ್ವರ ರಾಜ್ಯದ ಪ್ರಸಿದ್ದ ಪ್ರವಾಸಿ ತಾಣ. ಇಲ್ಲಿ ಪುರಾಣ ಪ್ರಸಿದ್ದ ಆತ್ಮಲಿಂಗವಿದ್ದು ಇದೊಂದು ಪವಿತ್ರ ಭಕ್ತಿ ಸ್ಥಳವೂ ಹೌದು. ಇನ್ನೊಂದೆಡೆ ಮೂರು ಕಡೆ ಜಲಧಾರೆ, ಸಮುದ್ರದ ಕಲರವ. ಇದು ಎಂತವರನ್ನು ತನ್ನತ್ತ ಆಕರ್ಷಿಸುತ್ತದೆ. ಇಂತಹ ತಾಣಗಳಿಗೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರತಿದಿನ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿನ ಆಡಳಿತ ಮಾತ್ರ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ ಎನ್ನುವದು ಪ್ರವಾಸಿಗರ ಆರೋಪ. ಒಮ್ಮೆ ಬಂದರೆ ಮತ್ತೊಮ್ಮೆ ಆ ಸ್ಥಳಕ್ಕೆ ಹೋಗಲೇ ಬಾರದು ಎಂದು ಹಿಡಿಶಾಪ ಹಾಕುತ್ತಾರೆ.
ತಮಿಳುನಾಡು, ಕೇರಳ, ಮುಂಬೈ ಅಲ್ಲದೆ ಕರ್ನಾಟಕದ ದೂರದ ಊರುಗಳಿಂದ ಖಾಸಗಿ ಬಸ್‌ನಲ್ಲಿ ಪ್ರವಾಸಿಗರು ಮುರ್ಡೇಶ್ವರಕ್ಕೆ ಬರುತ್ತಾರೆ. ಹೀಗೆ ಬರುವ ಹಲವರು ಮುರ್ಡೇಶ್ವರದ ದುಬಾರಿ ವಸತಿ ಗ್ರಹದಲ್ಲಿ ಉಳಿಯಲು ಮನಸ್ಸು ಮಾಡುತ್ತಿಲ್ಲ. ಗಾಡಿಯನ್ನು ದೇವಸ್ಥಾನದ ಪಾರ್ಕಿಂಗನಲ್ಲಿ ಹಾಕಿ ಅಲ್ಲೆ ಎಲ್ಲಾದರೂ ಜಾಗ ಇದ್ದಲ್ಲಿ ಮಲಗಿ ಬಸ್ಸನಲ್ಲೆ ಅಡುಗೆ ಮಾಡಿ ಊಟ ಮಾಡಿಕೊಂಡು ಹೋಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮುರ್ಡೇಶ್ವರ ದೇವಸ್ಥಾನದ ಆವರಣದಲ್ಲಿ ರಾತ್ರಿಯಾದರೆ ಪ್ರವಾಸಿಗರ ಬಸ್‌ಗಳಿಗೆ ಒಳಗೆ ಬರಲು ಅವಕಾಶ ನೀಡುತ್ತಿಲ್ಲ. ಪಾರ್ಕಿಂಗ್ ಎಲ್ಲಿ ಮಾಡುವುದು ಎಂದು ಸೆಕ್ಯೂರಿಟಿ ಗಾರ್ಡ ಅವರನ್ನು ಕೇಳಿದರೆ ಎಲ್ಲಿ ಬೇಕಾದರೂ ಮಾಡಿಕೊಳ್ಳಿ, ಅಲ್ಲಿ ಸಮುದ್ರದ ತೀರದಲ್ಲಿ ನಿಲ್ಲಿಸಿ ಇಲ್ಲಿ ಮಾತ್ರ ನಿಲ್ಲಿಸಬೇಡಿ ಎನ್ನುತ್ತಾರೆ. ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ. ಈ ಹಿಂದೆಯೂ ಸಮುದ್ರದ ಕಿನಾರೆಯಲ್ಲಿ ನಿಲ್ಲಿಸಿದ್ದ ಬಸ್ಸೊಂದು ನೀರು ಪಾಲಾಗುತ್ತಿದ್ದು ಬಳಿಕ ಜೆಸಿಬಿ ಸ್ಥಳಿಯರ ಸಹಾಯದಿಂದ ಸಾವಿರಾರು ರೂ ಖರ್ಚು ಮಾಡಿ ಮೇಲಕ್ಕೇತ್ತಲಾಗಿದೆ. ಹಾಗಾಗಿ ರಾತ್ರಿಯಲ್ಲಿ ಯಾರು ಸಮುದ್ರದ ತೀರದಲ್ಲಿ ಬಸ್ ಅಥವಾ ತಮ್ಮ ಘನ ವಾಹನಗಳನ್ನು ಪಾರ್ಕ ಮಾಡುತ್ತಿಲ್ಲ. ಎಲ್ಲಿಂದಲೊ ಬಂದ ಪ್ರವಾಸಿಗ ಒಂದು ದಿನಕ್ಕಾಗಿ ಈ ಕುರಿತು ದ್ವನಿ ಎತ್ತುವುದಿಲ್ಲ. ಇದು ಇಲ್ಲಿನವರಿಗೆ ವರವಾಗಿ ಪರಿಣಮಿಸಿದೆ.
ತಮಿಳುನಾಡಿನಿಂದ ನಾವು ೩೨ಮಂದಿ ಮುರ್ಡೇಶ್ವರ ಪ್ರವಾಸಕ್ಕೆಂದು ಖಾಸಗಿ ಬಸ್‌ನಲ್ಲಿ ಭಾನುವಾರ ರಾತ್ರಿ ಇಲ್ಲಿ ಬಂದಿದ್ದೇವು. ಆದರೆ ಇಲ್ಲಿನ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಸೆಕ್ಯುರಿಟಿ ಗಾರ್ಡ ಬಿಟ್ಟಿಲ್ಲ. ಬಸ್ ಇಡಲು ಯಾವುದೇ ಸುರಕ್ಷಿತ ಸ್ಥಳ ದೊರಕದೆ ರಾತ್ರಿಯೆಲ್ಲಾ ರಸ್ತೆ ಬದಿಯಲ್ಲಿ ಬಸ್ ಇಟ್ಟು ಪರದಾಡುವಂತಾಯಿತು.
ನಮಗೆ ಬಂದ ಈ ದುಸ್ಥಿತಿ ಇನ್ನು ಯಾರಿಗೂ ಬರದಿರಲಿ ಚೈನೈನಿಂದ ಬಂದ ಪ್ರವಾಸಿಗ ಎಂ ಎಸ್ ರಾಘವನ್ ಅಳಲು ತೋಡಿಕೊಂಡಿದ್ದಾರೆ.

error: