
ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಕಾರವಾರ, ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಮುರ್ಡೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರುಗಿತು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಉತ್ತರ ಕನ್ನಡ ಜಿಲ್ಲೆ ಯಕ್ಷಗಾನ, ಸಾಹಿತ್ಯ, ಜಾನಪದ ಕಲೆಗೆ ಅಪಾರ ಕೊಡುಗೆಯನ್ನು ನೀಡಿದ್ದು ಇಂದಿನ ಪೀಳಿಗೆಗೆ ಅದರತ್ತ ಒಲವು ಕಡಿಮೆಯಾಗುತ್ತಿದೆ, ಭಾರತ ದೇಶ ಸಂಗೀತ, ನೃತ್ಯ, ಶಿಲ್ಪಕಲೆಗಳನ್ನು ರಾಷ್ಟçಕ್ಕೇ ಪರಿಚಯಿಸಿದ ದೇಶವಾಗಿದ್ದು, ಇಂದು ಸರಕಾರಗಳು ನೀಡುತ್ತಿರುವ ಪ್ರೊತ್ಸಾಹದ ಕೊರತೆಯಿಂದಾಗಿ ಜನಪದ ಕಲೆಗಳು ನಶಿಸಿಹೋಗುತ್ತಿವೆ. ಸರಕಾರ ಇನ್ನಾದರೂ ಸಂಗೀತ, ಚಿತ್ರಕಲೆ, ಸಾಂಸ್ಕೃತಿ ಕಲೆಗಳ ಪ್ರೋತ್ಸಾಹಕ್ಕೆ ಮುಂದಾಗಬೇಕಾಗಿದೆ. ಆ ನಿಟ್ಟಿನಲ್ಲಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರು, ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದರು.
ರಾಷ್ಟಿçÃಯ ಶಿಕ್ಷಣ ನೀತಿಯನ್ನು ಈಗಾಗಲೇ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಜ್ಯಾರಿಗೆ ತಂದಿದ್ದು ಪ್ರಾಥಮಿಕ ಹಂತದಿAದಲೂ ಕೂಡಾ ಜ್ಯಾರಿಗೆ ತರಲು ಕ್ರಮ ವಹಿಸಲಾಗುತ್ತಿದೆ. ಕೇಂದ್ರ ಸರಕಾರ 15 ವರ್ಷಗಳಲ್ಲಿ ಜ್ಯಾರಿಗೆ ತರಲು ಉದ್ದೇಶಿಸಿದ್ದರೆ ರಾಜ್ಯ ಸರಕಾರ 5 ವರ್ಷಗಳಲ್ಲಿ ಜ್ಯಾರಿಗೆ ಮುಂದಾಗಿರುವುದು ಅಭಿನಂದನೀಯ ಎಂದೂ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ದಿನೇಶ ಗಾಂವಕರ್ ಕಲೆಯಲ್ಲಿ ನಾವು ಮಾಡುವ ಸಾಧನೆಯೇ ಶಾಶ್ವತವಾಗಿರುವುದು, ಸಂಸ್ಕೃತಿಗೆ ನಾವು ಗೌರವವನ್ನು ಕೊಟ್ಟಾಗ ಮಾತ್ರ ಅದನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಆರ್.ಎನ್.ಎಸ್. ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದು ಜಿಲ್ಲೆಗೊಂದು ವಿಶ್ವವಿದ್ಯಾಲಯದ ಅಗತ್ಯತೆ ಇದೆ. ಆ ಕಾರ್ಯವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಸರಕಾರದ ಗಮನಕ್ಕೆ ತಂದು ಸಾಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ನಿಟ್ಟೂರು, ಉ.ಕ.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸತೀಶ ಬಿ.ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಉ.ಕ.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಕಾರ್ಯದರ್ಶಿ ಎ.ಬಿ. ರಾಮರಥ, ಪ್ರಕಾಶ ರಾಣೆ ಉಪಸ್ಥಿತರಿದ್ದರು.
ಆರ್.ಎನ್.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಧವ ಪಿ. ಸ್ವಾಗತಿಸಿದರು. ಪಲ್ಲವಿ ಶೇಟ್ ನಿರ್ವಹಿಸಿದರು. ಪವಿತ್ರಾ ವಂದಿಸಿದರು.

More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: