May 2, 2024

Bhavana Tv

Its Your Channel

ಆರ್. ಎನ್. ಎಸ್‌ ಪದವಿ ಕಾಲೇಜಿನಲ್ಲಿ ಮಹಿಳಾ ಘಟಕದ ವತಿಯಿಂದ “ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವ” ಕುರಿತು ಉಪನ್ಯಾಸ ಕಾರ್ಯಕ್ರಮ

ಮುರ್ಡೇಶ್ವರ :-

ಆರ್.‌ ಎನ್.‌ ಎಸ್‌ ಪದವಿ ಕಾಲೇಜಿನಲ್ಲಿ ಮಹಿಳಾಕೋಶ (ಘಟಕ)ದ ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೂಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್.‌ ಎನ್.‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ದಿನೇಶ ಗಾವಂಕರ್ ರವರು ಮಾತನಾಡಿ ಮಹಿಳೆಯರ ರಕ್ಷಣೆ ಮತ್ತು ಪಾಲನೆ ಪ್ರತಿಯೊಬ್ಬರ ಕರ್ತವ್ಯ, ವಿದ್ಯಾರ್ಥಿಗಳು ಇಂತಹ ಉಪನ್ಯಾಸದ ಮಹತ್ವವನ್ನು ಪಡೆದುಕೊಳ್ಳಬೇಕೆಂದರು. ಕಾರ್ಯಕ್ರದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಪಲ್ಲವಿ ಶೆಟ್ಟಿ. ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಾಲಿ ಇವರು ವಿದ್ಯಾರ್ಥಿನಿಯರಿಗೆ ಆರೋಗ್ಯದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಜಯ ಕೆ.ಎಸ್ ರವರು ಇಂತಹ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿನಿಯರು ಪಡೆದು ಆರೋಗ್ಯವಂತರಾಗಿಬೇಕೆಂದರು. ವೇದಿಕೆಯಲ್ಲಿ ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ. ಮತ್ತು ಕನ್ನಡ ಉಪನ್ಯಾಸಕರಾದ ಗಣಪತಿ ಕಾಯ್ಕಿಣಿ ಹಾಜರಿದ್ದರು. ಕುಮಾರಿ ಅಶ್ವಿನಿ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ಸ್ವಾಗತಿಸಿದರು. ಇದೆ ವೇದಿಕೆಯಲ್ಲಿ ಡಾ. ಪಲ್ಲವಿ ಶೆಟ್ಟಿಯವರನ್ನು ಕಾಲೇಜು ವತಿಯಿಂದ ಸನ್ಮಾಸಲಾಯಿತು.

error: