May 2, 2024

Bhavana Tv

Its Your Channel

ಬೀನಾ ವೈದ್ಯ ಶಿಕ್ಷಣ ಸಂಸ್ಥೆಗೆ- “ಎಕ್ಸಲೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಅವಾರ್ಡ್ “

ಮುರ್ಡೇಶ್ವರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ಗೆ ಪ್ರತಿಷ್ಠಿತ “ಏಷಿಯನ್ ಪೆಸಿಪಿಕ್ ಐಕಾನ್ ಎಕ್ಸಲೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಪ್ರಶಸ್ತಿ ಲಭಿಸಿದೆ”. ತಲ್ಯಾಂಡ್ ನ ಬೆಂಗಕೋಕ್ನಲ್ಲಿ ದಿನಾಂಕ 11 ಡಿಸಂಬರ್ ನಲ್ಲಿ ನೆಡೆದ ಏಷಿಯನ್ ಪೆಸಿಪಿಕ್ ಎಜುಕೇಶನ್ ಸುಮಿತ್ ಅವಾರ್ಡ್ -22 ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸಂಸ್ಥೆಯ ಆಡಳಿತ ನಿರ್ದೇಶಕಿ ಮತ್ತು ಟ್ರಸ್ಟಿ ಡಾ. ಪುಷ್ಪಲತಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಂಸ್ಥೆಯು ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಗುಣಮಟ್ಟದ ಅಂತರ್ ರಾಷ್ಟಿಯ ಶಿಕ್ಷಣ ನೀತಿಯ ಆಯಮವನ್ನು ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ವಿಶೇಷ ಮತ್ತು ವಿಶಿಷ್ಟವಾದ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಸಾವಿರಾರು ಮಕ್ಕಳ ಶಿಕ್ಷಣ ಮತ್ತು ಜೀವನ ಶೈಲಿಯನ್ನು ರೂಪಿಸಲು ಶಮಿಸುತ್ತಿರುವುದನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸಂಸ್ಥೆಗೆ ಸಿಕ್ಕಿದ ಪ್ರಶಸ್ತಿಗೆ ಸಂಸ್ಥೆಯ ಅಧ್ಯಕ್ಷರಾದ ಮಾಂಕಾಳ್ ವೈದ್ಯ. ಆಡಳಿತ ನಿರ್ದೇಶಕಿಯದ ಡಾ. ಪುಷ್ಪಲತಾ ಮಾಂಕಾಳ್ ವೈದ್ಯ, ಸಲಹಾ ಸಮಿತಿಯ ಸದಸ್ಯರು, ಸಿಬಂದಿ ವರ್ಗದವರು, ಪಾಲಕ – ಪೋಷಕರು ಮತ್ತು ವಿದ್ಯಾರ್ಥಿಗಳು ಸಂತಸ ವಕ್ತಪಡಿಸಿದ್ದಾರೆ.

error: