May 2, 2024

Bhavana Tv

Its Your Channel

ಮುರಡೇಶ್ವರದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ

ಮುರಡೇಶ್ವರ:- ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದ್ರೆ ಬಿಜೆಪಿ ಈಗಿಂದಲೇ ತಮ್ಮ ಕಾರ್ಯಕರ್ತರನ್ನು ಕ್ರಿಯಾಶೀಲರಾಗಿಡಲು ಸಜ್ಜಾಗಿದ್ದು ಅದರಲ್ಲೂ ಕರಾವಳಿಯ ಮುರಡೇಶ್ವರದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಬಹುತೇಕ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ಪ್ರಾರಂಭಿಸಿದೆ. ಇನ್ನು ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದೆ. ಕಡಲ ನಗರಿ ಪ್ರಸಿದ್ದ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಎರಡು ದಿನಗಳ ಕಾಲ ಪದಾಧಿಕಾರಿಗಳ ಸಭೆಗೆ ಚಾಲನೆ ಸಿಕ್ಕಿದೆ.
ಸಭೆಗೆ ಚಾಲನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸ್ವಾತಂತ್ರ‍್ಯ ನಂತರ ನೈಜವಾದ ಕಾಂಗ್ರೆಸ್ ಉಳಿಯಲಿಲ್ಲ ಈಗಿನದ್ದು ನಕಲಿ ಕಾಂಗ್ರೆಸ್. ಕಾಂಗ್ರೆಸ್ ಭಯೋತ್ಪಾದಕ ಪಾರ್ಟಿಯಾಗಿದೆ.ಇವರ ಆಳ್ವಿಕೆಯಲ್ಲಿ ಬಾಂಬಿನ ,ಬಯೋತ್ಪಾದಕರ ಕಾರ್ಖಾನೆ ಪ್ರಾರಂಭವಾಯ್ತು , ಕಾಂಗ್ರೇಸ್ ಮತಬ್ಯಾಂಕಿನ ಆಸೆಯಲ್ಲಿ ಭೌತಿಕವಾಗಿ ದಿವಾಳಿಯಾಗಿದೆ.ಈ ದೇಶದಲ್ಲಿ ಯಾವ ವಿಷಯಕ್ಕೆ ಬೆಂಬಲವಾಗಿ ಇರಬೇಕು ಯಾವುದಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂಬ ಮಾನಸಿಕತೆ ಯಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ,
ಕಾAಗ್ರೆಸ್ ಕೇವಲ ಸಾವರ್ಕರ್ ವಿಷಯದಲ್ಲಿ ಮಾತ್ರ ವಿರೋಧ ಮಾಡುತ್ತಿಲ್ಲ, ದೇಶದ ನಮ್ಮ ಭದ್ರತೆ ವಿಷಯದಲ್ಲಿ ಪ್ರಶ್ನೆ ಮಾಡುತ್ತೆ ಸೈನಿಕರ, ವಿದೇಶಿ ನೀತಿಗಳ ಬಗ್ಗೆ ಪ್ರಶ್ನೆ ಮಾಡುತ್ತದೆ.ಎಲ್ಲವನ್ನೂ ವಿರೋಧ ಮಾಡಿ ಭೌತಿಕ ದಿವಾಳಿಯಾಗಿದೆ ಎಂದು ಹರಿಹಾಯ್ದರು,
ಡಿಕೆಶಿಯವರಿಗೆ ಬೆಳಗಾವಿ ಕುಕ್ಕರ್ ಹಾಗೂ ಮಂಗಳೂರು ಕುಕ್ಕರ್ ಒಂದೇ ಎಂದು ತಿಳಿದುಕೊಂಡಿದ್ದಾರೆ,ಬೆಳಗಾವಿ ಕುಕ್ಕರ್ ಒಡೆದರೆ ಇವರ ಕುಟುಂಬ ಚಿದ್ರವಾಗುತ್ತೆ. ಮಂಗಳೂರು ಕುಕ್ಕರ್ ಸಿಡಿದರೇ ಇಡೀ ಊರು ನಾಶಮಾಗುತ್ತೆ. ದೇಶ ವಿರೋಧಿ ಆಗಿರುವವರ ಬೆಂಬಲಕ್ಕೆ ಕೆಪಿಸಿಸಿ ಅಧ್ಯಕ್ಷರು ನಿಲ್ಲುತ್ತಾರೆ
ಅದಕ್ಕಾಗಿಯೇ ಕಾಂಗ್ರೆಸ್ ಭಯೋತ್ಪಾದಕ ಪಾರ್ಟಿಯಾಗಿದೆ. ಉಗ್ರನ ಎನ್ ಕೌಂಟರ್ ಮಾಡಿದಾಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರೊಬ್ಬರು ಕಣ್ಣೀರು ಹಾಕ್ತಾರೆ, ಸೈನಿಕರು ಸತ್ತಾಗ ಇವರು ಕಣ್ಣೀರು ಹಾಕುವುದಿಲ್ಲ,ಭ್ರಷ್ಟಾಚಾರಕ್ಕೆ ಅತಿ ಹೆಚ್ಚು ಆಧ್ಯತೆ ಕೊಟ್ಟಿದ್ದು ಕಾಂಗ್ರೆಸ್, ಮೋದಿ ಬಂದ ಮೇಲೆ ಭ್ರಷ್ಟಾಚಾರ ಇಲ್ಲವಾಗಿದೆ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷರೇ ಬೇಲ್ ಮೇಲಿದ್ದಾರೆ. ಸಿಬಿಐ ರೈಡ್ ಆದರೆ ಪ್ರತಿಭಟನೆ ಮಾಡ್ತಾರೆ,
ನರೇಂದ್ರ ಮೋದಿ, ಅಮಿತ್ ಶಾ ಮೇಲೆ ದೂರು ದಾಖಲಾದಾಗ ಹೋರಾಟ ಮಾಡಲಿಲ್ಲ,ಕಾನೂನಿನ ಮೂಲಕ ಗೆಲುವನ್ನ ಪಡೆದರು.ಆದರೆ ಕಾಂಗ್ರೆಸ್ ಗೆ ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲವಾಗಿದೆ.
ಡಿಕೆ ಶಿವಕುಮಾರ್ ರೌಡಿಸಂ ರಾಜಕಾರಣ ಬಿಟ್ಟು ಭಯೋತ್ಪಾದಕ ರಾಜಕಾರಣ ಪ್ರಾರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೈಟ್ :- ನಳೀನ್ ಕುಮಾರ್ ಕಟೀಲ್. ಬಿಜೆಪಿ ರಾಜ್ಯಾಧ್ಯಕ್ಷ.

ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಗಾಗಿ ಭಟ್ಕಳದಿಂದ ಮುರಡೆಶ್ವರದ ವರೆಗೂ ಬಿಜೆಪಿ ದ್ವಜದಿಂದ ಸಿಂಗಾರ ಮಾಡಲಾಗಿದ್ದು ಭಟ್ಕಳದ ಶಂಶುದ್ಧಿನ್ ವೃತ್ತದಲ್ಲಿ ಬಿಜೆಪಿ ದ್ವಜ ಹಾಕಿದ್ದಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನೆ ನೆಡೆಸಿ ದ್ವಜ ಕೀಳುವುದಾಗಿ ಬೆದರಿಕೆ ಹಾಕಿದ್ರು ನಂತರ ಪೊಲೀಸರ ಮಧ್ಯ ಪ್ರವೇಶದಿಂದ ಪುರಸಭೆ ಆವರಣಕ್ಕೆ ಮಾತ್ರ ಪ್ರತಿಭಟನೆ ಸೀಮಿತವಾಯಿತು. ಮುರಡೇಶ್ವರದಲ್ಲಿ ರಾಜ್ಯದ ಸುಮಾರು ೧೬೦ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು ಚುನಾವಣೆ ನಿಟ್ಟಿನಲ್ಲಿ ಪಕ್ಷ ಹೇಗೆ ಸಂಘಟನೆ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನ ಹೇಗೆ ಜನರಿಗೆ ತಿಳಿಸಬೇಕು ಎನ್ನುವ ಮಾಹಿತಿಯನ್ನ ಪದಾಧಿಕಾರಿಗಳಿಗೆ ನೀಡಲಿದ್ದು ಪದಾಧಿಕಾರಿಗಳು ಕಾರ್ಯಕರ್ತರಿಗೆ ತಿಳಿಸುವಂತೆ ಸೂಚಿಸಲಿದ್ದಾರೆ. ಇನ್ನು ಸಭೆಯ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಹತ್ತು ಹಲವು ಜನಪರ ಕೆಲಸವನ್ನ ಮಾಡಿದೆ. ಇದನ್ನ ಜನರಿಗೆ ತಿಳಿಸುವ ಕೆಲಸ ಪದಾಧಿಕಾರಿಗಳು ಮಾಡುವಂತೆ ಕರೆ ನೀಡಿದ್ದಲ್ಲದೇ ಕಾಂಗ್ರೆಸ್ ನವರಿಗೆ ಟಿಪ್ಪು ಸುಲ್ತಾನ್ ದೊಡ್ಡ ವ್ಯಕ್ತಿಯಾಗಿ ತೋರ್ತಾರೆ.ಅವರ ಜಯಂತಿ ಮಾಡ್ತಾರೆ.ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸಾವರ್ಕರ್ ವಿರೋಧಿಯಾಗಿ ಕಾಂಗ್ರೆಸ್ ನವರಿಗೆ ಕಾಣುತ್ತಾರೆ ಬೆಳಗಾವಿ ಯಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ಮಾಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಹೇಳಿದರು.
ಬೈಟ್ :-ಕೋಟಾ ಶ್ರೀನಿವಾಸ ಪೂಜಾರಿ.. ಜಿಲ್ಲಾ ಉಸ್ತುವಾರಿ ಸಚಿವ..

ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನ ಬಿಜೆಪಿ ಪಡೆದಿತ್ತು. ಈ ಬಾರಿಯೂ ಹೆಚ್ಚು ಸ್ಥಾನದಲ್ಲಿ ಗೆಲುವನ್ನ ಪಡೆಯುವ ಉದ್ದೇಶ ಹೊಂದಿರುವ ಬಿಜೆಪಿ ಈ ನಿಟ್ಟಿನಲ್ಲಿಯೇ ಕರಾವಳಿಯಲ್ಲಿ ಸಭೆಯ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದೆ.ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಕರಾವಳಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ಪಕ್ಷ ಸಂಘಟನೆಗೆ ಇನ್ನಷ್ಟು ಶಕ್ತಿ ನೀಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

error: