
ಮುರುಡೇಶ್ವರ ; ಆರ್. ಎನ್. ಎಸ್. ವಿದ್ಯಾನಿಕೇತನದಲ್ಲಿ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ವೈವಿಧ್ಯಮಯವಾಗಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಶ್ರೀ ದಿನೇಶ್ ಗಾಂವಕರ್ ವಿದ್ಯಾನಿಕೇತನದ ಮಕ್ಕಳ ಪರಿಸರ ಕಾಳಜಿಯನ್ನು ಮೆಚ್ಚಿಕೊಂಡರು.
ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ಕೆಲವು ವಿದ್ಯಾರ್ಥಿಗಳು ಪರಿಸರ ಕಾಳಜಿಯ ಛದ್ಮವೇಷವನ್ನು ಧರಿಸಿ ಪರಿಸರ ಜಾಗ್ರತಿಯನ್ನು ಮೂಡಿಸಿದರು.
ಶಾಲೆಯ ವಿಜ್ಞಾನ ಶಿಕ್ಷಕಿಯರು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ವನ ಮುಂತಾದುವುಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರಜ್ಞೆಯನ್ನು ಮೆರೆದರು. ಶಾಲೆಯ ಪ್ರಾಂಶುಪಾಲೆ ಗೀತಾ ಕಿಣಿ ಮಾರ್ಗದರ್ಶನ ನೀಡಿದರು.

More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: