May 3, 2024

Bhavana Tv

Its Your Channel

ಸ್ಪರ್ಧಾತ್ಮಕ ಪರೀಕ್ಷಾ ಮಾಹಿತಿ ಕಾರ್ಯಗಾರ

ಮುರುಡೇಶ್ವರ ; ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) ಮುರ್ಡೇಶ್ವರದ ವತಿಯಿಂದ, ಜನತಾ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಲು, ಸಂಸ್ಥೆಯ ‘ವಿಸ್ಮಿತಾ ಸಭಾಭವನ’ದಲ್ಲಿ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು. ಈ ತರಬೇತಿಯಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪುಸ್ತಕ, ವೃತ್ತ ಪತ್ರಿಕೆಗಳ ಪರಿಚಯ ನೀಡುವುದರ ಜೊತೆ, ವಿದ್ಯಾರ್ಥಿಗಳ ಭಾವನಾತ್ಮಕ ಚಿಂತನೆಗಳನ್ನು ಇತರ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಪ್ರಾರಂಭದಲ್ಲಿ, ಸಂಸ್ಥೆಯ ಪ್ರಾಚಾರ್ಯರಾದ ಶೋಭಾ ನಾಯ್ಕ ರವರು, ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, ವಿದ್ಯಾರ್ಥಿಗಳ ಜೊತೆಗೂಡಿ, ಪರಸ್ಪರ ವಿಚಾರ-ವಿನಿಮಯಗಳನ್ನು ಏರ್ಪಡಿಸಿ, ನಮ್ಮ ಸಂಸ್ಥೆಯ ಕಾರ್ಯಕ್ರಮದ ಉದ್ದೇಶವನ್ನು ಪರಿಚಯಿಸಿದರು. ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್, ಯೋಜನಾ ನಿರ್ದೇಶಕರಾದ ಶ್ರೀಮತಿ ಆಶಾ ಎಸ್. ಕಾಮತ್ ಹಾಗೂ ಸಂಘಟಕರಾದ ಚಂದ್ರಕಲಾ ಕಾಮತ್ ರವರು ಸಾರಸ್ಯಮಯವಾಗಿ ನಡೆಸಿಕೊಟ್ಟರು. ಈ ಬಗ್ಗೆ, ವಿದ್ಯಾರ್ಥಿಗಳು ಅತೀವ ಆಸಕ್ತಿಯಿಂದ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸಂಘಟನಾ ನಿಯೋಜಕರಾದ ಹೇಮಾ ನಾಯ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

error: