December 19, 2024

Bhavana Tv

Its Your Channel

ಸಿದ್ದಾಪುರದ ಭುವನಗಿರಿ ಬೆಟ್ಟದ ಮೇಲೆ ಧ್ವಜಾರೋಹಣ ನಡೆಸಿದ ಕರುನಾಡ ವಿಜಯ ಸೇನೆ.

ಸಿದ್ದಾಪುರ: ಕರ್ನಾಟಕ ರಾಜ್ಯೋತ್ಸವ ೨೦೨೧ ಅಂಗವಾಗಿ ಈ ವರ್ಷ ಕರುನಾಡ ವಿಜಯ ಸೇನೆ ವತಿಯಿಂದ ಉತ್ತರ ಕನ್ನಡದ ಜಿಲ್ಲೆಯ ಸಿದ್ದಾಪುರದ ಭುವನಗಿರಿ ಬೆಟ್ಟದ ಮೇಲಿರುವ ಕರ್ನಾಟಕದ ಕನ್ನಡಾಂಬೆಯ ಮೂಲಸ್ಥಾನವಾದ ಭುವನೇಶ್ವರಿ ತಾಯಿ ದೇವಸ್ಥಾನದ ಭುವನಗಿರಿಯಲ್ಲಿ ತಾಯಿ ಭುವನೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ರಾಜ್ಯಾಧ್ಯಕ್ಷರಾದ ಹ.ನಿ.ದೀಪಕ್ ರವರ ಮುಂದಾಳತ್ವದಲ್ಲಿ ಧ್ವಜಾರೋಹಣ ಮಾಡುವ ಮೂಲಕ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು.

ನಂತರ ಕದಂಬ ಕನ್ನಡಿಗ ಎಂಬ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಂಜುನಾಥ ಓಮಯ್ಯ ಖಾರ್ವಿಯವರ ೩೦ ವರ್ಷದ ನಿಸ್ವಾರ್ಥವಾದ ಸಮಾಜಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕ ಅದ್ಯಕ್ಷರಾದ ಮಹೇಶ್ ಆರ್.ಎಸ್ , ರಾಜ್ಯ ಉಪಾಧ್ಯಕ್ಷರಾದ ಸಚಿಂದ್ರ ಆರ್,ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಎಸ್, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾದ ನೇ.ಲ ರಾಮಪ್ರಸಾದ,ರಾಜ್ಯ ಸಾಮಾಜಿಕ ಜಾಲತಾಣದ ರೇಣುಕಾ ಪ್ರಸಾದ,ಹಾಗು ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ, ಜಿಲ್ಲಾ ವಕ್ತಾರ ಶ್ರೀರಾಮ್ ಹೊನ್ನಾವರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ ನಾಯ್ಕ,ಪ್ರಧಾನ ಕಾರ್ಯದರ್ಶಿ ಜಿಎಂ ರಾಹುಲ,ಉಪಾಧ್ಯಕ್ಷ ಸಂದೇಶ ನಾಯ್ಕ,ಯುವ ಘಟಕ ಅಧ್ಯಕ್ಷ ರಾಘವೇಂದ್ರ ನಾಯ್ಕ,ಉಪಾಧ್ಯಕ್ಷ ನಿತಿನ್ ಆಚಾರ್ಯ,ಸಂಚಾಲಕ ಅಲ್ತಾಫ್ ಶೇಖ,ಹನುಮಂತ ತಾಂಡೇಲ್ ಮಹೇಶ್ ಮೆಸ್ತ,ಗುರು ಹರಿಕಾಂತ,ಗಜೇAದ್ರ ನಾಯ್ಕ, ರಾಜ್ಯದ ಹಾಗೂ ಜಿಲ್ಲೆಯ ತಾಲೂಕಿನ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: