May 6, 2024

Bhavana Tv

Its Your Channel

ಅ. 19 ಸಿದ್ಧಾಪುರದಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಬೃಹತ್ ಜಾಥ.

ಸಿದ್ಧಾಪುರ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಸಿದ್ಧಾಪುರದಲ್ಲಿ ಅಕ್ಟೋಬರ್ 19 ರಂದು ಬೃಹತ್ ಪಾದಯಾತ್ರೆ ಮತ್ತು ರ‍್ಯಾಲಿ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅವರು ಇಂದು ಸಿದ್ಧಾಪುರ ತಾಲೂಕಿನ, ಬಾಲಭವನ ಸಭಾಂಗಣದಲ್ಲಿ ಜರುಗಿದ ಅರಣ್ಯ ಅತಿಕ್ರಮಣದಾರರನ್ನ ಉದ್ದೇಶಿಸಿ ಮಾತನಾಡುತ್ತಿದ್ದರು. ಸುಫ್ರೀಂ ಕೋರ್ಟನಲ್ಲಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಹಾಗೂ ಅಸಮರ್ಪಕ ಜಿಪಿಎಸ್
ಕಾರ್ಯÀದ ಕುರಿತು ರ‍್ಯಾಲಿಯ ಸಂದರ್ಭದಲ್ಲಿ ಸರಕಾರಕ್ಕೆ ಒತ್ತಾಯಿಸಲಾಗುವುದೆಂದು
ಅವರು ಹೇಳಿದರು.

ರೈತ ಮುಖಂಡರಾದ ವಿರಭದ್ರ ನಾಯ್ಕ, ನಾಗಪತಿ ಗೌಡ, ಸುರೇಶ ನಾಯ್ಕ, ಸೀತಾರಾಮ ಗೌಡ, ಹರಿಹರ ನಾಯ್ಕ ಸಭೆಯನ್ನ ಉದ್ದೇಶಿಸಿ ಮಾತನಾಡಿದರು. ಸ್ವಾಗತವನ್ನು ಕೆಟಿ ನಾಯ್ಕ ಹಾಗೂ ವಂದನಾರ್ಪಣೆಯನ್ನು ವಿನಾಯಕ ಗೌಡ ಕೋಡಿಗದ್ದೆ ಮಾಡಿದರು.

ಅಸಮರ್ಪಕ ಜಿಪಿಎಸ್‌ಗೆ ಖಂಡನೆ :
ಅರಣ್ಯವಾಸಿಯ ಸಾಗುವಳಿ ಕ್ಷೇತ್ರ ಮತ್ತು ಅವಲಂಭಿತವಾಗಿರುವ ಕ್ಷೇತ್ರವನ್ನು ಹೊರತುಪಡಿಸಿ ಜರುಗಿದ ಜಿಪಿಎಸ್ ನಕಾಶೆಯ ವಸ್ತುಸ್ಥಿತಿಗೆ ಹೊರತಾಗಿದ್ದು ಜಿಪಿಎಸ್ ಆಧಾರದ ಮೇಲೆ ಅರಣ್ಯ ಸಿಬ್ಬಂದಿಗಳು ಅಗಳ ಹೊಡೆಯುವ ಕಾರ್ಯ ಜರುಗುತ್ತಿರುವುದು ಖಂಡನಾರ್ಹ ಈ ಕುರಿತು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯ ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ :
ತಾಲೂಕಿನಾದ್ಯಂತ ಅರಣ್ಯವಾಸಿಗಳ ಮೇಲೆ ಅನಾವಶ್ಯಕ ಕಿರುಕುಳ, ಹಿಂಸೆ ಮತ್ತು ದೌರ್ಜನ್ಯವನ್ನು ಹಾಗೂ ಸಾಗುವಳಿಗೆಗೆ ಆತಂಕ ಉಂಟುಮಾಡುತ್ತಿರುವ ಸ್ಥಳೀಯ ಅರಣ್ಯ ಸಿಬ್ಬಂದಿಗಳ ಕೃತ್ಯದ ಕುರಿತು ಸಭೆಯಲ್ಲಿ ಆಕಾಶ ಕೊಂಡ್ಲಿ, ಚೌಡ ಗೌಡ ದೊಡ್ಮನೆ, ತಿಮ್ಮ ನಾಯ್ಕ ನೇಗಾರ, ವೆಂಕಟ ಗೌಡ ಕುಲ್ಲಿ, ಶ್ರೀಧರ ಹೆಗಡೆ ನಿಲ್ಕುಂದ, ಜಿತೇಂದ್ರ ನಾಯ್ಕ ಗೋವಿನಗುಡ್ಡ, ಗಣಪತಿ ಗೊಂಡ, ನಾಗಪ್ಪ ಪಟಗಾರ ತ್ಯಾಗಲಿ, ಗಣಪತಿ ಹರಿಜನ
ಹಲಗೇರಿ, ಗಜಾನನ ಭಟ್ಟ ಕೋಡಿಗದ್ದೆ, ವೇದಕುಮಾರ ನಾಯ್ಕ ಶಿರಲಗಿ, ಡಿಜಿ ಗೌಡ ದೊಡ್ಮನೆ, ಗಾಯತ್ರಿ ನಾಯ್ಕ ಕೋಡಿಗದ್ದೆ ಇವರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

error: