December 21, 2024

Bhavana Tv

Its Your Channel

ಸಿದ್ಧಾಪುರದಲ್ಲಿ ಜ. 25 ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಸಿದ್ಧಾಪುರ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಸಿದ್ಧಾಪುರದ ಗಂಗಾಬಿಕಾ ದೇವಸ್ಥಾನದ ಸಭಾಭವನ, ನೆಹರೂ ಮೈದಾನದ ಏದುರುಗಡೆಮುಂಜಾನೆ 10 ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರವೀಂದ್ರನಾಯ್ಕ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಕುರಿತು ಮಾಹಿತಿ, ಫೇಬ್ರವರಿಯಲ್ಲಿ ಬೆಂಗಳೂರಿನಲ್ಲಿ ಜರಗುವ ಬಜೆಟ್ ಅಧಿವೇಶನದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಅನುಭೋಗದ ಕ್ಷೇತ್ರಕ್ಕೆ ಆತಂಕ ಪಡಿಸುವುದಿಲ್ಲ ಎಂಬ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಲಿಖಿತ ಪತ್ರದ ಕುರಿತು, ಅಸಮರ್ಪಕ ಜಿಪಿಎಸ್ ರಶೀದಿ ಹಿಂತಿರುಗಿಸುವ ಹಾಗೂ ಗುರುತಿನ ಪತ್ರವಿತರಿಸುವ ಕುರಿತು ಸಭೆಯಲ್ಲಿಚರ್ಚಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಸಿದ್ಧಾಪುರ ತಾಲೂಕಿನ ಅರಣ್ಯ ಅತಿಕ್ರಮಣದಾರರು ಸಭೆಯಲ್ಲಿ ಭಾಗವಹಿಸಲು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

error: