March 27, 2025

Bhavana Tv

Its Your Channel

ಯಶಸ್ವಿಯಾಗಿ ನಡೆದ “ಹಂಗಾರಖoಡ ಹಬ್ಬ”

ಸಿದ್ದಾಪುರ ತಾಲೂಕಿನ ತ್ಯಾಗಲಿ ಪಂಚಾಯತ ವ್ಯಾಪ್ತಿಯ ಹಂಗಾರಖAಡ ಶ್ರೀ ಚೌಡೇಶ್ವರಿ, ನಾಗ ,& ಪರಿವಾರ ದೇವತೆಗಳ 6 ನೇ ವರ್ಧಂತ್ಯುತ್ಸವದ ಪ್ರಯುಕ್ತ ಫೆ 12 ಭಾನುವಾರ ಸಾಂಸ್ಕೃತಿಕ ಹಬ್ಬ (ಹಂಗಾರಖAಡ ಹಬ್ಬ) ಚಿಕ್ಕ ಮಕ್ಕಳ ಕಾರ್ಯಕ್ರಮಗಳು, ಸಭಾಕಾರ್ಯಕ್ರಮ, ಯಕ್ಷರಂಗದ ಸಾಧಕರಿಗೆ ಸನ್ಮಾನ,ಅದ್ಧೂರಿಯಾಗಿ ಜರುಗಿತು.
ರಾತ್ರಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ,ಗೇರಸೊಪ್ಪ,ಹೊನ್ನಾವರ (ಉ.ಕ) & ದಿಗ್ಗಜ ಅತಿಥಿ ಕಲಾವಿದರಿಂದ ಅದ್ದೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನ “ಚಿತ್ರಾಕ್ಷಿ ಕಲ್ಯಾಣ” ಸುಂದರವಾಗಿ, ಅದ್ಧೂರಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಶ್ರೀ ಭಕ್ತಾದಿಗಳು, ಸಾಂಸ್ಕೃತಿಕ ಕಲಾಭಿಮಾನಿಗಳು,ಕಲಾಪ್ರೇಮಿಗಳು ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಂಜೆ ಸಭಾಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ರಮೇಶ ಎನ್ ನಾಯ್ಕ ಬಾಳೇಕೈ ಅಧ್ಯಕ್ಷತೆ ವಹಿಸಿದರೆ, ಉದ್ಘಾಟಕರಾಗಿ ವೇ/ಮೂ/ ವಿನಾಯಕ ಸು ಭಟ್ಟರು, ಮುಖ್ಯ ಅತಿಥಿಗಳಾಗಿ ಸಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಉಪೇಂದ್ರ ಪೈ ಸಿರಸಿ,ಜಿಲ್ಲೆಯ ಮಾದರಿ ಸೋಸೈಟಿಯಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್ ಬಿ ಹೆಗಡೆ ಮತ್ತೀಹಳ್ಳಿ, ತ್ಯಾಗಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಎಮ್ ಹೆಗಡೆ ಉಪಸ್ಥಿತರಿದ್ದರು

error: