May 5, 2024

Bhavana Tv

Its Your Channel

ಡಾ.ಗಜಾನನ ಭಟ್‌ರವರ ಸಂಶೋಧನಾ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಪ್ರಶಸ್ತಿ

ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಏಕೈಕ ಮೂತ್ರ ರೋಗ ತಜ್ಞರು, ಲೈಂಗಿಕ ವೈದ್ಯರಾದ ಡಾ.ಗಜಾನನ ಭಟ್ ಹಾಗೂ ಅವರ ಧರ್ಮ ಪತ್ನಿ ಡಾ. ಅನುರಾಧಾ ಅವರ ಸಹಕಾರದೊಂದಿಗೆ ” ತಾಯಂದಿರ ಜನನಾಂಗ ಸಮಸ್ಯೆ ಮತ್ತು ಪರಿಹಾರ ” ದ ಕುರಿತಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಪ್ರಶಸ್ತಿ ಲಭಿಸಿರುವುದು ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

ಐ ಎಸ್‌ಎಸ್ ಎಂ ( ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಸೆಕ್ಯುವಲ್ ಮೆಡಿಸಿನ್ ) ನಿಂದ ಟೋಕಿಯೋದಲ್ಲಿ ನಡೆದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದ್ದು ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ವೈದ್ಯರಿವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ, ಡಾ.ಗಜಾನನ ಹೆಗಡೆ ಅವರು ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ಮೂಲಕವಾಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದು ಕಾರ್ಮಿಕ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಶುಭ ಹಾರೈಸಿದ್ದಾರೆ.

error: