May 16, 2024

Bhavana Tv

Its Your Channel

ಕೃಷಿ ಕಾನೂನು ಹಿಂದಕ್ಕೆ: ರೈತ ಹೋರಾಟಕ್ಕೆ ಜಯ, ಶಿರಸಿಯಲ್ಲಿ ಸಿಹಿ ಹಂಚಿ ವಿಜಯೋತ್ಸವ.

ಶಿರಸಿ: ದೇಶದಾದ್ಯಂತ ತೀವ್ರ ರೈತರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮೂರು ಕೃಷಿ ಕಾನೂನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಭೂಮಿ ಹಕ್ಕು ಹೋರಾಟಗಾರರು ಶಿರಸಿಯಲ್ಲಿ ಇಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿಕೊಂಡರು. ಶಿರಸಿಯ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಮಾಲಾರ್ಪಣೆ ಮಾಡಿದರು.

ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯಿದೆ ಹಿಂದಕ್ಕೆ ಪಡೆದಿರುವುದು ರೈತರ ಹೋರಾಟಕ್ಕೆ ದೊರಕಿರುವ ಐತಿಹಾಸಿಕ ಜಯವಾಗಿದ್ದು ಇರುತ್ತದೆ. ಹಿಂದೆ ಈಸ್ಟ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರö್ಯ ದೊರಕಿದ ಭಾರತಕ್ಕೆ ಇಂದು ಮತ್ತೆ ಕಾರ್ಪೊರೆಟ್ ಕಂಪನಿಯ ಮೂಲಕ ದೇಶದ ಆಡಳಿತ ರೈತರ ವ್ಯವಹಾರ ನಿಯಂತ್ರಿಸಲು ಸರಕಾರ ಹೊರಟಿರುವ ಕ್ರಮ ಖಂಡನೀಯವಾಗಿತ್ತು ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.
ಕ್ಷಮೆ ಮತ್ತೆ ಪರಿಹಾರಕ್ಕೆ ಅಗ್ರಹ:
೧೫ ತಿಂಗಳುಗಳ ದೀರ್ಘ ರೈತ ಹೋರಾಟ ಸಂದರ್ಭದಲ್ಲಿ ೩೫೭ ರೈತರು ಮೃತರಾಗಿದ್ದು, ಸಾವಿರಾರು ಸಂಖ್ಯೆಯ ರೈತರಿಗೆ ನಷ್ಟ ಉಂಟಾಗಿರುವುದಲ್ಲದೇ ಮತ್ತು ನಿರಪರಾಧಿ ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಕೇಸ್ ಹಿಂದಕ್ಕೆ ಪಡೆಯಲು ಹಾಗೂ ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ ನೀಡಲು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಈ ಸಂಧರ್ಭದಲ್ಲಿ ಅಗ್ರಹಿಸಿದರು.
ಈ ಸಂಧರ್ಭದಲ್ಲಿ ಲಕ್ಷö್ಮಣ ಮಾಳ್ಳಕ್ಕನವರ, ರಾಜು ನರೇಬೈಲ್, ತಿಮ್ಮ ಮರಾಠಿ, ಶಿವಪ್ಪ ಹಂಚಿನಕೇರಿ, ಅಬ್ದುಲ್ ಸಾಬ, ಇಬ್ರಾಹಿಂ ಇಸಳೂರು, ಗಣಪತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: