November 1, 2024

Bhavana Tv

Its Your Channel

ಶಿರಸಿ ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರಗುಪ್ಪ ಗ್ರಾಮದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ.

ಶಿರಸಿ:- ಸರಗುಪ್ಪದ ನಾರಾಯಣ ಗೌಡ ಎಂಬುವವರಿಗೆ ಸೇರಿದ ಅಡಿಕೆ ತೋಟದ ಪಕ್ಕದಲ್ಲಿ ಎರಡು ದಿನದ ಹಿಂದೆ ಸುಮಾರು 12 ಅಡಿಯಷ್ಟು ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ತಾನಾಗೇ ಕಾಡಿಗೆ ತೆರಳಬಹುದು ಎಂದು ಮಾಲೀಕ ನಿರ್ಲಕ್ಷಿಸಿದ್ದರು. ಆದರೆ ಹಳ್ಳದ ಪಕ್ಕದ ಪೊದೆಯ ಮೇಲೆ ಕುಳಿತಿದ್ದ ಹಾವು ಅಕ್ಕಪಕ್ಕವೇ ಸುಳಿದಾಡುತ್ತಿದ್ದರಿಂದ ಆತಂಕಗೊAಡು, ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಅವರನ್ನು ಕರೆಸಿದರು. ವಿಷಯ ತಿಳಿದು ಕಾಳಿಂಗ ಸರ್ಪವನ್ನು ನೋಡಲು ಊರಿನವರೆಲ್ಲ ಸೇರಿದ್ದರು. ಸಾರ್ವಜನಿಕರ ಸಮ್ಮುಖದಲ್ಲೇ ಉರಗ ಪ್ರೇಮಿ ಪ್ರಶಾಂತ್, 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ದೂರದ ಕಾಡಿಗೆ ಬಿಟ್ಟರು.

ಸ್ಥಳದಲ್ಲಿದ್ದ ಜನರನ್ನು ಉದ್ದೇಶಿಸಿ “ಹಾವುಗಳನ್ನು ಕಂಡಾಗ ನಿರ್ಲಕ್ಷ ತೋರದೆ ತಕ್ಷಣ ಉರಗ ತಜ್ಞರಿಗಾಗಲಿ, ಅರಣ್ಯ ಇಲಾಖೆಗಾಗಲಿ ವಿಷಯ ಮುಟ್ಟಿಸಬೇಕು. ಒಂದು ವೇಳೆ ಹಾವು ಕಡಿದರೆ ಮನೆ ಮದ್ದು ಮಾಡದೇ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು”. ಎಂದು ಪ್ರಶಾಂತ್ ಸಲಹೆ ನೀಡಿದರು.

ರದಿ : ನರಸಿಂಹ ನಾಯ್ಕ್ ಹರಡಸೆ

error: