November 1, 2024

Bhavana Tv

Its Your Channel

ಕಸ್ತೂರಿ ರಂಗನ್ ವರದಿಗೆ ವಿರೋಧ ; ಭೌತಿಕ ಸಮೀಕ್ಷೆಆಧಾರಿತ ಪ್ರಮಾಣ ಪತ್ರ ಹಸಿರು ನ್ಯಾಯಕರಣ ಪೀಠಕ್ಕೆ ಸಲ್ಲಿಸಲು ರವೀಂದ್ರ ನಾಯ್ಕ ಅಗ್ರಹ.

ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ತೀರಸ್ಕರಿಸಲು ಘೋಷಿಸಲ್ಪಟ್ಟ ಪ್ರದೇಶಗಳ ಭೌತಿಕ ಸಮೀಕ್ಷೆ ತಯಾರಿಸಿ ವೈಜ್ಞಾನಿಕ ಅಂಶಗಳ ಆಕ್ಷೇಪಣೆ ಮತ್ತು ಪ್ರಮಾಣ ಪತ್ರವನ್ನ ಸಲ್ಲಿಸಬೇಕು ಎಂದು ಹಸಿರು ನ್ಯಾಯಕರಣ ಪೀಠಕ್ಕೆ ರಾಜ್ಯ ಸರಕಾರ ಸಲ್ಲಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ತೀರಸ್ಕರಿಸಲು ಜುಲೈ, 30 ರಂದು ಶಿರಸಿಯಲ್ಲಿ ಸಂಘಟಿಸಿದ ಪ್ರತಿಭಟನಾ ರ‍್ಯಾಲಿಯ ಪೂರ್ವಭಾವಿ ಸಭೆ ನಿನ್ನೆ ಶಿರಸಿ ತಾಲೂಕಿನ ದೇವನಳ್ಳಿ, ಮಂಜಗುಣಿ ಮುಂತಾದ ಗ್ರಾಮ ಪಂಚಾಯತ ವ್ಯಾಪ್ತಿಯಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೇರಳ ಸರಕಾರ ಭೌತಿಕ ಸಮೀಕ್ಷೆಯ ಆಧಾರದ ಮೇಲೆ ಪ್ರಮಾಣ ಮತ್ತು ಆಕ್ಷೇಪಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಮಾರು 3,114 ಚ.ಕೀ.ಮೀ ಪ್ರದೇಶ ಕಡಿತವಾಗಿರುವ ಹಿನ್ನೆಲೆಯಲ್ಲಿ ಸಲ್ಲಿಸಬೇಕೆಂದು ಅವರು ಅಗ್ರಹಿಸಿದರು.
ಸಂಪುಟ ನಿರ್ಣಯಕ್ಕೆ ಮಾನ್ಯತೆ ಇಲ್ಲ :
ವೈಜ್ಞಾನಿಕ ಹಾಗೂ ಭೌತಿಕ ಸಮೀಕ್ಷೆಯ ವಾಸ್ತವಿಕ ಮತ್ತು ನೈಜತೆಯ ಅಂಕೆ ಸಂಖ್ಯೆ ಸಕಾರಣ ನಿಡದೇ ಕೇವಲ ಸಂಪುಟ ತೀರ್ಮಾನದ ಹಿನ್ನೆಲೆಯಲ್ಲಿಯೇ ಕಸ್ತೂರಿ ರಂಗನ ವರದಿ ತೀರಸ್ಕರಿಸಲಾಗಲೀ ಅಥವಾ ಕ್ಷೇತ್ರ ಕೈ ಬಿಡಲು ಸಾಧ್ಯವಿಲ್ಲವೆಂದು ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರದ ಸಂಪುಟ ತೀರ್ಮಾನದ
ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಮಚಂದ್ರ ಮರಾಠಿ, ಕಿರಣ ಮರಾಠಿ, ಸುದರ್ಶನ್, ಸಂತೋಷ ಜೀನ್, ನಾರಾಯಣ ಗೌಡ, ಹರಿಹರ ಹಳ್ಳಿಬೈಲ್, ಲಕ್ಷö್ಮಣ, ಮಾದೇವಿ ಮರಾಠಿ, ನಾರಾಯಣ, ದೀವಾಕರ್, ಪ್ರಮೋದ ಮುಂತಾದವರು ಉಪಸ್ಥಿತರಿದ್ದರು.

error: