ಶಿರಸಿ: ಕೇಂದ್ರ ಪರಿಸರ ಸೂಕ್ಷö್ಮ ಪ್ರದೇಶದ ಘೋಷಣೆಗೆ ಸಂಬAಧಿಸಿ ವಸ್ತುಸ್ಥಿತಿ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಕುರಿತು ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಜುಲೈ 30 ರಂದು ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಂಘಟಿಸಿದ ರ್ಯಾಲಿ ಮುಂದಕ್ಕೆ ಹಾಕಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು
ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಪರಿಸರ ಸೂಕ್ಷö್ಮ ಪ್ರದೇಶದ ಘೋಷಣೆಯ ವರದಿಯು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಆರು ರಾಜ್ಯಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿರುವುದರಿಂದ, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ನೀವೃತ್ತ ಅರಣ್ಯ ಅಧಿಕಾರಿ ಸಂಜಯ್ ಕುಮಾರ ನೇತ್ರತ್ವದ ಐದು ಸದಸ್ಯರ ತಂಡವನ್ನು ರಚಿಸಿ, ಪರಿಸರ
ಸೂಕ್ಷö್ಮ ಪ್ರದೇಶದ ಸ್ಥಿತಿ-ಗತಿ ಅಧ್ಯಯನಕ್ಕೆ ಒಂದುವರ್ಷ ಕಾಲಾವಧಿ ನಿಗದಿಗೊಳಿಸಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರವು ತಾತ್ಪೂರ್ತಿಕ ಪರಿಹಾರವಾಗಿದ್ದು ಇರುತ್ತದೆ.
ಭೌತಿಕ ಸಮೀಕ್ಷೆ, ವಾಸ್ತವಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಹಾಗೂ ಸ್ಥಳ ಪರಿಶೀಲನೆ ಆಧಾರದ ಮೇಲೆ ಕಸ್ತೂರಿ ರಂಗನ್ ವರದಿಯ ವಾಸ್ತವಿಕತೆಯನ್ನು ಪರಿಶೀಲಿಸಬೇಕೆಂಬ ಒತ್ತಾಯಕ್ಕೆ ಕೇಂದ್ರ ಪರಿಸರ ಇಲಾಖೆ ಹೊಸ ಸಮಿತಿ ರಚಿಸಿದ್ದು ಸ್ವಾಗತಾರ್ಹವಾದರೂ, ಸೂಕ್ಷö್ಮ ಪ್ರದೇಶದ ಮಾನದಂಡ ಬೀಡಬೇಕೆಂಬ ಬೇಡಿಕೆಗೆ
ಸಂಬAಧಿಸಿ ಕಾನೂನಾತ್ಮಕ ಮತ್ತು ಸಂಘಟಿತ ಹೋರಾಟ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.
ಹೊಸ ಕಾನೂನಿಗೆ ವಿರೋಧ :
ಅರಣ್ಯ ರಕ್ಷಣೆ, ಪೋಷಣೆ, ಸಂರಕ್ಷಣೆಗೆ ಈಗಲೇ ಸಾಕಷ್ಟು ಕಾನೂನುಗಳು ಜಾರಿಯಲ್ಲಿದ್ದು, ಅದರ ಪರಿವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟವು ಸೇರಲಪ್ಪಡುವುದರಿಂದ ಈ ದಿಶೆಯಲ್ಲಿ ಹೊಸ ನೀತಿ, ನಿಯಮ, ಕಾನೂನು ಅವಶ್ಯಕತೆಯಿಲ್ಲ. ಹೊಸ ಪ್ರಯೋಗದ ಮೂಲಕ ಹೊಸ ನೀತಿ, ನಿಯಮ, ಕಾನೂನು ಜಾರಿಗೆ ತರಲು
ಪ್ರಯತ್ನಿಸಿದ್ದಲ್ಲಿ ಈ ಭಾಗದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ