December 22, 2024

Bhavana Tv

Its Your Channel

ಉತ್ತರ ಕನ್ನಡಕ್ಕೆ 500 ಕಾಲುಸಂಕ ಮಂಜೂರಿಗೆ ಮನವಿ;ಬಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಘೋಷಣೆ.

ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಗ್ರಾಮೀಣ ಭಾಗದ ಸಂಪರ್ಕಕ್ಕೆ ಮುಂದಿನ ವಾರ್ಷಿಕ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡಲಾಗುವುದು. ಜಿಲ್ಲೆಯ ಕಾಲುಸಂಕ ಸಂಪರ್ಕದ ಬೇಡಿಕೆ ಸರಕಾರ ಗಂಭೀರವಾಗಿ ಪರಿಗಣಿಸುವುದು ಎಂದು ಕರ್ನಾಟಕದ ಮುಖ್ಯಮಂತ್ರಿಬಸವರಾಜ್ ಬೋಮ್ಮಾಯಿ ಅವರು ಹೇಳಿದರು.
ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಗುಡ್ಡಗಾಡು ಜಿಲ್ಲೆಯಾಗಿರುವ ಉತ್ತರ ಕನ್ನಡಕ್ಕೆ ಗ್ರಾಮೀಣ ಭಾಗದ ಸಂಪರ್ಕಕ್ಕಾಗಿ ತೀವ್ರ ಅವಶ್ಯವಿರುವ 500 ಕಾಲುಸಂಕ ಮಂಜೂರಿಗೆ ಘೋಷಣೆ ಮಾಡಬೇಕೆಂದು ಅಗ್ರಹಿಸಿ ಮನವಿ ನೀಡಿದ ಹಿನ್ನೆಲೆಯಲ್ಲಿ ಮೇಲಿನಂತೆ ಹೇಳಿದರು.
ಕಾಲುಸಂಕ ಕೊರತೆಯಿಂದ ಗ್ರಾಮೀಣ ಭಾಗದ ಗುಡ್ಡಗಾಡು ಜನರು ಹಾಗೂವಿದ್ಯಾರ್ಥೀಗಳು ದಿನನಿತ್ಯ ಸಂಚಾರದ ಸಮಸ್ಯೆಗಳನ್ನ ಏದುರಿಸುತ್ತಿರುವರು. ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದಲೇ ರಚಿಸಿಕೊಂಡ ತಾತ್ಕಾಲಿಕ ಕಾಲುಸಂಕದ ಮೇಲಿನ ಓಡಾಟ ಅಪಾಯದಿಂದ ಕೂಡಿದ್ದಾಗಿದೆ ಎಂದು ಮನವಿಯಲ್ಲಿಪ್ರಸ್ತಾಪಿಸಲಾಗಿದೆ.

error: