December 20, 2024

Bhavana Tv

Its Your Channel

ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ: ಕಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಥಮ

ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿ ತಾಲೂಕಿನ ಕಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.ಈ ಪಂದ್ಯಾವಳಿಯಲ್ಲಿ 804 ಶಾಲೆಗಳು ಪಾಲ್ಗೊಂಡಿದ್ದವು.ಶಿರಸಿಯ ಕಲ್ಲಿ ಮುರಾರ್ಜಿ ವಸತಿ ಶಾಲೆಯ ತಂಡವು ಬೆಂಗಳೂರು, ಕಲಬುರ್ಗಿ ಹಾಗು ಮೈಸೂರು ವಿಭಾಗವನ್ನು ಸೋಲಿಸಿ ಪ್ರಥಮ ಸ್ಥಾನಗಳಿಸಿದೆ.ಶಿರಸಿ ತಂಡದಲ್ಲಿ ಶುಭಾನ ಅಲಿ,ಶರತ್,ಗಿರೀಶ,ವಿಷ್ಣು,ಆಶಿಫ್,ಕೌಶಿಕ್,ಪ್ರಸನ್,ಶಸಾಂಕ,ಮದನ್,ಗಜೇAದ್ರ,ಆದಿತ್ಯ ಭಾಗವಹಿಸಿದ್ದರು.ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಮನೋಹರ ಎಲ್ ನಾಯ್ಕ ಹಾಗು ಸಂತೋಣ ಗುಡಾಜಿ ತರಬೇತಿ ನೀಡಿದ್ದರು.ಮಕ್ಕಳ ಸಾಧನೆಗೆ ಪ್ರಾಂಶುಪಾಲರಾದ ರಾಘವೇಂದ್ರ ಎ ಹಾಗೂ ಯುವಜನ ಸೇವಾಕ್ರೀಡಾ ಇಲಾಖೆ ವಿದ್ಯಾನಗರ ಬೆಂಗಳೂರು ಅಭಿನಂದನೆ ಸಲ್ಲಿಸಿದ್ದಾರೆ.

error: