ಶಿರಸಿ: ಅರಣ್ಯ ಭೂಮಿಯನ್ನೇ ವಾಸ್ತವ್ಯ ಮತ್ತುಸಾಗುವಳಿಗಾಗಿ ಅವಲಂಭಿತವಾಗಿರುವ ಅರಣ್ಯವಾಸಿಗಳ ಕಳೆದ 32 ವರ್ಷದ ಸಾಂಘಿಕ ಮತ್ತುಕಾನೂನಾತ್ಮಕ ಹೋರಾಟದ ಮಜಲುಗಳು ಹೋರಾಟದ ಇತಿಹಾಸದ ಪುಟಗಳಿಗೆಸೇರಲ್ಪಟ್ಟಿದ್ದೆ. ಸುಫ್ರೀಂ ಕೋರ್ಟಿನ ಇತ್ತೀಚಿನ ಅನಧೀಕೃತ ಒತ್ತುದಾರರನ್ನ ಒಕ್ಕಲೆಬ್ಬಿಸುವ ಹಿನ್ನೆಲೆಯಲ್ಲಿಅರಣ್ಯವಾಸಿಗಳು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಭೂಮಿ ಹಕ್ಕಿಗಾಗಿ ಫೇಬ್ರವರಿ 10 ಅರಣ್ಯವಾಸಿಗಳು ಬೆಂಗಳೂರಿನಲ್ಲಿಹೋರಾಟದಧ್ವನಿಯನ್ನು ಮೊಳಗಲಿದ್ದಾರೆ.
ಅರಣ್ಯವಾಸಿಗಳು ದಿನನಿತ್ಯ ಒಕ್ಕಲೆಬ್ಬಿಸುವ ಆತಂಕದ ಜೊತೆಯಲ್ಲಿ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಕಿರುಕುಳ ಏದುರಿಸುತ್ತಿದ್ದಾರೆ. ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನಾತ್ಮಕ ತೊಡಕಿನಿಂದ ಕಾನೂನಿನ ಸಂಕೋಲೆಯಲ್ಲಿ ಸಿಲುಕಿ, ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಕಳೆದ 3 ದಶಕಗಳಿಂದ ಹೋರಾಟದ ಮಜಲುಗಳು ಗಟ್ಟಿತನ
ತೋರಿಸಿದರೂ ಭೂಮಿ ಹಕ್ಕಿನಿಂದವAಚಿತರಾಗುತ್ತಿರುವುದು ವಿಷಾದಕರ.
ಕರ್ನಾಟಕ ರಾಜ್ಯದಲ್ಲಿ 2,95,048 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 15,798 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದ್ದು, ದೇಶದಲ್ಲಿ ಅರಣ್ಯ ಪ್ರದೇಶ ಮತ್ತುಅರಣ್ಯವಾಸಿಗಳ ಅವಲಂಭಿತ ಸಂಖ್ಯೆಯಲ್ಲಿ 5 ನೇ ಸ್ಥಾನದಲ್ಲಿದ್ದರೂ, ಹಕ್ಕು ಪತ್ರ ಪಡೆಯುವಲ್ಲಿ ಕರ್ನಾಟಕ 16 ನೇ ಸ್ಥಾನದಲ್ಲಿ
ಇರುವುದಲ್ಲದೇ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವಿಫಲವಾಗಿ, ತೀರಸ್ಕಾರಗೊಂಡ ಅರಣ್ಯವಾಸಿಗಳು ನಿರಾಶ್ರಿತರಾಗುವ ಭೀತಿಯಲ್ಲಿ5000 ಕ್ಕೂ ಮಿಕ್ಕಿಅರಣ್ಯವಾಸಿಗಳು ಫೇಬ್ರವರಿ 10 ರ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ
ವೀಶ್ಲೇಷಿಸಿದ್ದಾರೆ.
ಸೌಲಭ್ಯ ಉಂಟು, ಮಂಜೂರಿ ಇಲ್ಲ:
ವಾಸ್ತವ್ಯದಕಟ್ಟಡಕ್ಕೆಸ್ಥಳೀಯ ಸಂಸ್ಥೆಯಿoದ ಇಮಾರತ್ತಿನ ಕಟ್ಟಡ ನoಬರ್ ದಾಖಲಿಸಿದ್ದು ಅರಣ್ಯವಾಸಿಗಳಿಗೆನೀರು, ರಸ್ತೆ, ವಿದ್ಯುತ್, ರೇಷನ್ ಕಾರ್ಡ, ಮತದಾರರಚೀಟಿ, ಶಿಕ್ಷಣ ಕೇಂದ್ರ ಎಲ್ಲವನ್ನೂ ನೀಡಿದಾಗಿಯೂ ಅನಧೀಕೃತ ಒತ್ತುದಾರರಿದ್ದು ಒಕ್ಕಲೆಬ್ಬಿಸುವ ಭೀತಿಯಲ್ಲಿಸಿಲುಕಿದ್ದಾರೆಎಂದು ಅಧ್ಯಕ್ಷರವೀಂದ್ರನಾಯ್ಕಹೇಳಿದ್ದಾರೆ.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ