December 21, 2024

Bhavana Tv

Its Your Channel

ಇಂದು ಅರಣ್ಯವಾಸಿಗಳ ಮಹಾ ಸಂಗ್ರಾಮ -ಅರಣ್ಯ ಕಚೇರಿಗೆ ಭೇಟಿ.

ಮುಖ್ಯಮಂತ್ರಿ ಭೇಟಿಗಾಗಿ ಶಿರಸಿಯಿಂದ ಬೃಹತ್ ಪಾದಯಾತ್ರೆ.

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಮಂಗಳವಾರ ಅರಣ್ಯ ಕಚೇರಿಗೆ ಭೇಟ್ಟಿ ಮತ್ತು ಶಿರಸಿಯಿಂದ ಬನವಾಸಿಗೆ ಪಾದಯಾತ್ರೆ ಮೂಲಕ ಸಂಚರಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಭೇಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು
ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರ ಈ ಹಿಂದೆ ಫೇಬ್ರವರಿ 25 ರ ಒಳಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಹಾಗೂ ಉನ್ನತ ಮಟ್ಟದ ಸಭೆಯನ್ನ ಬೆಂಗಳೂರಿನಲ್ಲಿ ಸಂಘಟಿಸಲಾಗುವುದೆAದು ಆಶ್ವಾಸನೆ ನೀಡಲಾಗಿತ್ತು. ಅಲ್ಲದೇ, ಎ.ಕೆ ಸಿಂಗ್ ಹೆಚ್ಚುವರಿ ಪಿ.ಸಿ.ಸಿ.ಎಫ್ ಅವರು ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಫೇಬ್ರವರಿ 25 ರ ಒಳಗೆ ಜಿಲ್ಲೆಯಲ್ಲಿ ಅರಣ್ಯವಾಸಿಗಳೊಂದಿಗೆ ಸಮಾಲೋಚಿಸಲಾಗುವುದೆಂದು ಭರವಸೆ ಸಹಿತ ಹುಸಿಯಾಗಿರುವುದರಿಂದ ಫೇಬ್ರವರಿ 28 ರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಾದಯಾತ್ರೆಯ ವಿವರ:
ಫೇಬ್ರವರಿ 28 ರಂದು, ಮುಂಜಾನೆ 10 ಗಂಟೆಗೆ, ಶಿರಸಿಯ ಹಳೇ ಬಸ್‌ಸ್ಟಾಂಡ್ ಸರ್ಕಲ್, ಗಾಂಧೀ ಪ್ರತಿಮೆಯ ಎದುರಿನಿಂದ ಅರಣ್ಯವಾಸಿಗಳು ಡಿ.ಎಫ್.ಒ ಕಚೇರಿಗೆ ಸಮಾಲೋಚಿಸಲು ಹೋರಡಲಿದ್ದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳ ಭೇಟ್ಟಿಗಾಗಿ ಶ್ರೀ ಮಾರಿಕಾಂಬ ದೇವಾಲಯದ ಏದುರಿನಿಂದ ಪಾದಯಾತ್ರೆ ಮೂಲಕ ಮಧ್ಯಾಹ್ನ 2 ಗಂಟೆಗೆ ಹೊರಟು, ಸಂಜೆ 5 ಗಂಟೆಗೆ ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ತಲುಪಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಲಾಗುವುದೆಂದು ಅವರು ಹೇಳಿದರು.

error: