April 18, 2025

Bhavana Tv

Its Your Channel

ಚುನಾವಣೆ ಪ್ರಕ್ರಿಯೆ ಕುರಿತು ಯಲ್ಲಾಪುರದ ತಹಶಿಲ್ದಾರರಿಂದ ಪತ್ರಿಕಾಗೋಷ್ಠಿ

ಯಲ್ಲಾಪುರ ; ಕರ್ನಾಟಕ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿoದ ನಡೆಯುವ ಚುನಾವಣೆ ಪ್ರಕ್ರಿಯೆ ಕುರಿತು ಯಲ್ಲಾಪುರದ ತಹಶಿಲ್ದಾರರು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಯಲ್ಲಾಪುರ ತಾಲ್ಲೂಕಿನಲ್ಲಿ ೧೫ ಗ್ರಾಮ ಪಂಚಾಯತ ಮತ್ತು ೧ ಪಟ್ಟಣ ಪಂಚಾಯಿತಿಯಿoದ ಒಟ್ಟು ೧೬ ಮತಗಟ್ಟೆಗಳಿದ್ದು ೧೭೮ ಮತದಾರರಿದ್ದು ಅದರಲ್ಲಿ ೮೭ ಗಂಡು, ೯೧ ಹೆಣ್ಣು ಮತದಾರರು ಮತ ಚಲಾಯಿಸಲಿದ್ದಾರೆ. ೧೬ ಮತಗಟ್ಟೆಯಲ್ಲಿ ೨ ಸೆಕ್ಟರ್ ಅಧಿಕಾರಿ ೧ ಪ್ಲಾಯಿಂಗ್ ಸ್ಕ್ವಾಡ್ ಅಧಿಕಾರಿ ಮತ್ತು ೧ ವಿ.ಎಸ್.ಟಿ. ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಎರಡು ಮತಗಟ್ಟೆಗೆ ೨ಮತಗಟ್ಟೆ ಅಧಿಕಾರಿ, ೧ ಮೈಕ್ರೋಒಬ್ಸರ್ವರ್ ಅಧಿಕಾರಿ, ೧ ವಿಡಿಯೋಗ್ರಾಫರರು ಅವಿರತವಾಗಿ ವಿಡಿಯೋ ಗ್ರಾಫ್ ಮಾಡುತ್ತಿರುತ್ತಾರೆ. ಮಸ್ಟರಿಂಗ ಮತ್ತು ಡಿಮಸ್ಟರಿಂಗ್ ಕೇಂದ್ರವು ತಹಶೀಲ್ದಾರ ಕಚೇರಿಯಲ್ಲಿ ಇರುತ್ತದೆ. ತಾಲೂಕಿನ ಜಿಲ್ಲಾ ಸರಹದ್ದು ಕಿರವತ್ತಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಚುನಾವಣೆಯಲ್ಲಿ ಒಟ್ಟು ೫ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಆಧ್ಯತೆಯ ಮತದಾನದ ಪ್ರಕಾರ ಯಾವುದಾದರೂ ಒಂದು ಅಂಕೆಯಲ್ಲಿ ಪ್ರಾಶಸ್ತ್ಯ ಮತ ಪ್ರಕಾರ ಮತ ಚಲಾಯಿಸಬೇಕಾಗುತ್ತದೆ. ಮತಗಟ್ಟೆಯಲ್ಲಿ ಪಿಡಿಒರವರು ಗುರುತು ಹಿಡಿಯುವ ಅಧಿಕಾರಿಯಾಗಿರುತ್ತಾರೆ. ಮತದಾನಕ್ಕೆ ಬರುವಾಗ ಚುನಾವಣಾ ಗುರುತಿನ ಚೀಟಿ, ಲೈಸೆನ್ಸ್ ಪ್ರತಿ,ಆಧಾರ ಕಾರ್ಡ್, ಕರ್ನಾಟಕ ಚುನಾವಣಾ ಆಯೋಗ ಸೂಚಿಸಿದ ಯಾವುದೇ ಗುರುತಿನ ಚೀಟಿ ತರಲು ಅವಕಾಶವಿದೆ. ಮತ ಹಾಕಲು ಬೆಳಿಗ್ಗೆ ೮ ರಿಂದ ಸಂಜೆ ೪ ರವರೆಗೆ ಅವಕಾಶವಿರುತ್ತದೆ. ಮತದಾನವಾದ ಮುಗಿದ ಕೂಡಲೇ ಮತ ಪೆಟ್ಟಿಗೆಯನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.

ವರದಿ ; ವೇಣುಗೋಪಾಲ ಮದ್ಗುಣಿ

error: