April 28, 2024

Bhavana Tv

Its Your Channel

ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.

ಯಲ್ಲಾಪುರ : ಯಲ್ಲಾಪುರ ನಗರದಲ್ಲಿ ಬೈಪಾಸ್ ರಸ್ತೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಸಾರ್ವಜನಿಕರಿಗೆ,ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ರಸ್ತೆ ಸಂಚಾರ ಮಾಡುವುದು ದುಸ್ತರವಾಗಿದೆ.ಸೈಕಲ್ ಹಾಗೂ ಬೈಕ್ ಸವಾರರು,ರಿಕ್ಷಾ ಓಡಿಸುವವರು, ಮಹಿಳೆಯರು ಪ್ರತಿ ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಗಮನಿಸಿ,ನಗರದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಬಗ್ಗೆ ಸರ್ಕಾರ ಗಮನ ಸೆಳೆಯಲು ದಿನಾಂಕ 11.12.23ರ ಸೋಮವಾರ ಬೆಳಿಗ್ಗೆ 10ಘಂಟೆಗೆ ಯಲ್ಲಾಪುರ ನಗರದ ವೈ.ಟಿ.ಎಸ್.ಎಸ್. ಮೈದಾನದಿಂದ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ನಿಡುವ ಬಗ್ಗೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಾರೆಂದು ರಾಮು ನಾಯ್ಕ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಯಲ್ಲಾಪುರ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರವರಿಗೆ ಈಗಾಗಲೇ ಮನವಿಯನ್ನು ನೀಡಿದ್ದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲು ವಿನಂತಿಸಲಾಗಿದೆ ಎಂದರು. ರವಿ ಶಾನಭಾಗ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಯವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಟ್ರಾಫಿಕ್ ಪೋಲಿಸ್ ರನ್ನು ಜನದಟ್ಟಣೆ ಯಿರುವ ಪ್ರದೇಶದಲ್ಲಿ ನಿಯುಕ್ತಿ ಗೊಳಿಸಬೇಕೆಂದರು. ಪತ್ರಿಕಾ ಗೋಷ್ಠಿಯಲ್ಲಿ ಬೀರಣ್ಣಾ ನಾಯಕ, ವೇಣುಗೋಪಾಲ ಮದ್ಗುಣಿ, ಮಹಮದ್ ಗೌಸ್, ಟಿ.ಶಂಕರ ಭಟ್ಟ, ನಾಗರಾಜ ಮದ್ಗುಣಿ,ಎ.ಎ.ಶೇಖ, ವಕೀಲ ಬೇಬಿ ಅಮೀನಾ,ಮಾದೇವಿ ನಾಯಕ, ಉಲ್ಲಾಸ ಮಹಾಲೆ, ಜಗನ್ನಾಥ ರೇವಣಕರ, ಪ್ರಭಾಕರ ನಾಯ್ಕ, ದಾಸಿಂತ ಫರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು

ಭಾವನಾ ಟಿವಿಗಾಗಿ ವೇಣುಗೋಪಾಲ ಮದ್ಗುಣಿ ಯಲ್ಲಾಪುರ

error: