December 22, 2024

Bhavana Tv

Its Your Channel

ನವರಾತ್ರಿಯ ೪ನೇ ದಿನ ವಿಶೇಷ ಕೇಸರಿ ವಸ್ತ್ರ ಧರಿಸಿದ ಸಿಟಿ ಹೈಸ್ಕೂಲ್ ವಿದ್ಯಾಥಿಗಳು ಹಾಗೂ ಶಿಕ್ಷಕರು.

ವಿಜಯನಗರ: ನವರಾತ್ರಿಗೆ ಕ್ಷಣಗಣನೆ ಆರಂಭವಾಗಿದ್ದು, ೯ ದಿನ ನಡೆಯುವ ವಿಶೇಷ ಹಬ್ಬಕ್ಕೆ ಮನೆಗಳಲ್ಲಿ ತಯಾರಿ ನಡೆದಿರುತ್ತದೆ. ನವರಾತ್ರಿಗೆ ೯ ದಿನ ದುರ್ಗಾಮಾತೆ ಬೇರೆ ಬೇರೆ ರೂಪಗಳಲ್ಲಿ ದರ್ಶನ ಪಡೆಯುವ ಭಾಗ್ಯ ಭಕ್ತರಿಗೆ ಲಭ್ಯವಾಗುತ್ತದೆ. ೯ ದಿನಕ್ಕೆ ೯ ಬೇರೆ ಬೇರೆ ಬಣ್ಣದ ಬಟ್ಟೆ ಧರಿಸಬೇಕು. ಇದರಿಂದ ತಾಯಿ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.

ನವರಾತ್ರಿಯ ೪ನೇ ದಿನ ಕೂಷ್ಮಾಂಡದೇವಿಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಗೆ ಎಂಟು ಕೈಗಳು ಇರುವುದರಿಂದ ಆಕೆಯನ್ನು ಅಷ್ಟಭುಜ ದೇವಿ ಎಂದೂ ಕರೆಯಲಾಗುತ್ತದೆ. ಸೂರ್ಯನು ಪ್ರಕಾಶಮಾನವಾಗಿ ಮತ್ತು ಭೂಮಿಗೆ ಬೆಳಕು ನೀಡುವಂತೆ ಕೂಷ್ಮಾಂಡದೇವಿ ನೋಡಿಕೊಳ್ಳುತ್ತಾಳೆ ಅನ್ನೋ ಮಾತುಗಳಿವೆ. ಹಾಗಾಗಿ ಸೂರ್ಯನ ಪ್ರತೀಕವಾದ ಕೇಸರಿ ವಸ್ತ್ರ ಶುಭವಾಗಿರುತ್ತದೆ. ಈ ದಿನ ಕೇಸರಿ ಅಥವಾ ಕಿತ್ತಳೆ ಬಣ್ಣ ಉಡುಪು ಧರಿಸಿ ಪೂಜೆ ಸಲ್ಲಿಸಬೇಕು.

ಇಂತಹ ಮಹತ್ವಪೂರ್ಣ ದಿನದಂದು ಹುಬ್ಬಳ್ಳಿಯ ವಿಜಯನಗರದಲ್ಲಿರುವ ಸಿಟಿ ಹೈಸ್ಕೂಲ್ ನಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಕೇಸರಿ ವಸ್ತ್ರ ಧರಿಸಿ ನವರಾತ್ರಿಯ ನಾಲ್ಕನೇಯ ದಿನವನ್ನು ವೈಭವದಿಂದ ಆಚರಿಸಿದರು. ಈ ಬಣ್ಣವು ಶಕ್ತಿ ಮತ್ತು ಸಂತೋಷವನ್ನು ಸೂಚಿಸುತ್ತದೆ.

ವರದಿ : ರಮೇಶ ಇಟಗೋಣಿ

error: