December 21, 2024

Bhavana Tv

Its Your Channel

ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ

ವಿಜಯಪುರ:- ಪುಣ್ಯಕ್ಷೇತ್ರ ಶಿರಡಿಯಲ್ಲಿ ಕಳೆದ ಸೋಮವಾರ ಶ್ರೀ ಸಾಯಿ ಪರಿಕ್ರಮ ಉತ್ಸವ ಜರಗಿತು .
ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ದೇಶಾದ್ಯಂತ ಶ್ರೀ ಸಾಯಿ ಪರಿಕ್ರಮ ಉತ್ಸವವನ್ನು ಆಚರಿಸಲು ಮನವಿ ಮಾಡಿತ್ತು ತಾಳಿಕೋಟೆಯಲ್ಲಿ ಸಮಸ್ತ ಶ್ರೀ ಸಾಯಿ ಭಕ್ತ ಮಂಡಳಿ ವತಿಯಿಂದ ಶ್ರೀ ಸಾಯಿ ಪರಿಕ್ರಮ ಉತ್ಸವವನ್ನು ಆಚರಿಸಲಾಯಿತು.
ನಗರದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಸಾಯಂಕಾಲ 6:00 ಯಿಂದ ಭಜನೆ ಆನಂತರ ಪ್ರಾರ್ಥನಾ ಗೀತೆ ಬಾಬಾರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ನAತರ ಪ್ರಾಸ್ತಾವಿಕ ಭಾಷಣ ಆನಂದ ಕುಲಕರ್ಣಿಯವರಿಂದ ಜರುಗಿತು.
ವೇದಿಕೆ ಮೇಲೆ ವೇದಮೂರ್ತಿ ವಸಂತ ಭಟ್ ಜೋಶಿ, ಹಿರಿಯ ಪತ್ರಕರ್ತರು ಜಿ ಟಿ ಘೋರ್ಪಡೇ,
ಡಾಕ್ಟರ್ ಟಿ ಟ ಶೆಟ್ಟಿ, ಬಸವರಾಜ ಮದರ್ಕಲ್, ಬೋರಮ್ಮ ಕುಂಬಾರ್, ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ವಿಜಯ್ ಮಹೇಂದ್ರಕರ್, ಕಸ್ತೂರಿಬಾಯಿ ಫುಲಸ್, ರೇಣುಕಾ ಹಂಚಾಟೆ, ಹಾಗೂ ಸಾಯಿ ಭಕ್ತರಾದಂತಹ ಸಿದ್ದು ಕೋಳಕೂರ್ ವಸಂತ ಹಜೇರಿ ಅಮರಣ್ಣ ಹೂಗಾರ್ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ: ಅಮೋಘ ವಿಜಯಪುರ

error: