December 21, 2024

Bhavana Tv

Its Your Channel

ಹುಟ್ಟು ಹಬ್ಬವನ್ನ ವಿಭಿನ್ನವಾಗಿ ಆಚರಿಸಿದ ಉದ್ಯಮಿ , ಸಮಾಜ ಸೇವಕ ಶಿವರಾಜ ಅಕ್ಕಿ

ಇಲಕಲ್ ; ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಕ್ಷಣ ಕ್ಷಣದ ಮಾಹಿತಿಗಾಗಿ ಊರು ಓಣಿ ಹಳ್ಳಿ ಗಳಲ್ಲಿ ಸುದ್ದಿ ಸಂಗ್ರಹಿಸಿ ಸುದ್ದಿ ಮಾಡಲು ತಮ್ಮ ಜೀವನವನ್ನೇ ಪಣಕ್ಕಿಟ್ಟು ವರದಿ ಮಾಡುತ್ತಿರುವ ಪತ್ರಕರ್ತರಿಗೆ ಕೊರೋನಾ ಸುರಕ್ಷತಾ ದೃಷ್ಟಿಯಿಂದ ನಗರದ ವಾಣಿಜ್ಯ ಉದ್ಯಮಿಯಾದ ಶಿವರಾಜ ಅಕ್ಕಿ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ಯ ಚಿತ್ತರಗಿ -ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿಗಳಾದ ಗುರು ಮಹಾಂತ ಶ್ರೀಗಳ ಅಮೃತ ಹಸ್ತದಿಂದ ನಗರದಲ್ಲಿ ಇರುವ ಪತ್ರಕರ್ತರಿಗೆ ಸ್ಟೀಮ್‌ರ್ ,ಮಾಸ್ಕ, ವಿತರಿಸಿ ಕರೋನ ವಿರುದ್ಧದ ಹೋರಾಟಕ್ಕೆ ವಿಭಿನ್ನವಾಗಿ ಕೈ ಜೋಡಿಸಿದರು.
ಇದೇ ಸಂದರ್ಭದಲ್ಲಿ ಇಳಕಲ್ಲಿನ ಗುರುಮಹಾಂತ ಶ್ರೀಗಳು ಸ್ಟೀಮರ್ ಬಗ್ಗೆ ಯಾವ ರೀತಿ ಬಳಕೆ ಮಾಡುವ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸಮಾಜ ಸೇವಕ ಉದ್ದಿಮೆದಾರರಾದ ಶಿವರಾಜ ಅಕ್ಕಿಯವರನ್ನು ಶ್ರೀ ಮಠದ ಪರವಾಗಿ ಮತ್ತು ಮಾಧ್ಯಮ ದೃಶ್ಯ ಮಾಧ್ಯಮ ಪರವಾಗಿ ಗುರುಮಹಾಂತ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು

ವರದಿ: ವಿನೋದ ಬಾರಿಗಿಡದ

error: