ಹೊನ್ನಾವರ ; ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಿತ್ ತಾಂಡೇಲ ನೇತೃತ್ವದಲ್ಲಿ ಲಾಕ್-ಡೌನ್ ನಿಂದ ಆರ್ಥಿಕ ತೊಂದರೆ ಒಳಗಾಗಿರುವ ಹೊನ್ನಾವರ ಪಟ್ಟಣದ ವಿವಿಧ ಭಾಗದ ಸುಮಾರು ೬೦ ಬಡ ಕುಟುಂಬಗಳಿಗೆ ದವಸ ಧಾನ್ಯದ ಕಿಟ್ ವಿತರಿಸಿದರು.
ಈ ಸಂದರ್ಬದಲ್ಲಿ ಶ್ರೀರಾಮ್ ಜಾದುಗಾರ ಮಾತನಾಡಿ ದಾನಿಗಳ ಸಹಕಾರದಿಂದ ತೀರಾ ಬಡ ಕುಟುಂಬದ ಮನೆಗಳಿಗೆ ದವಸ ಧಾನ್ಯ ಕಿಟ್ ವಿತರಿಸಲಾಗಿದೆ ಈ ಕಾರ್ಯಕ್ಕೆ ಸಹಕಾರ ನೀಡಿದ ದಾನಿಗಳಿಗೆ ಆಭಾರಿಯಾಗಿದ್ದೇವೆ ಎಂದರು.
ಕರೋನಾ ಮಾರಿಯಿಂದ ರಕ್ಷಣೆ ಪಡೆಯಲು ಮಾಸ್ಕ,ಸಾಮಾಜಿಕ ಅಂತರ ಕಾಪಾಡಿ,ಮನೆಯಲ್ಲಿಯೇ ಇರಿ ಎಂದು ಜಾಗ್ರತಿ ಮೂಡಿಸಿದರು. ಈ ವೇಳೆ ಮಂಜುನಾಥ ಖಾರ್ವಿ, ಕೃಷ್ಣ ಹರಿಜನ, ಅನಿಫ್ ಶೇಖ, ಚಂದ್ರಕಾAತ ಮೇಸ್ತ ಇದ್ದರು. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ