ಕುಮಟಾ : ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಸೋಮವಾರ ಖಾಸಗಿ ಶಾಲೆಯ ಶಿಕ್ಷಕರಿಗೆ ರೇಷನ್ ಕಿಟ್ ಗಳನ್ನು ದಾನಿಗಳಾದ ಎಂ ಆರ್ ಉಪಾಧ್ಯಾಯ ಹಾಗೂ ಕುಮಟಾದ ಸರ್ಕಲ್ ಇನ್ಸಪೇಕ್ಟರ್ ಶಿವಕುಮಾರ ನಾಯ್ಕ ಅವರು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ಗುರು ಗೌರವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು,
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಕುಮಟಾದ ಸಿಪಿಐ ಶಿವಕುಮಾರ ನಾಯ್ಕ ಅವರು ಯುವಾ ಬ್ರಿಗೇಡ್ ಉತ್ತಮವಾದ ಕೆಲಸ ಮಾಡುತ್ತಿದ್ದು ಇಂತಹ ಸಂಧರ್ಭದಲ್ಲಿ ಖಾಸಗಿ ಶಾಲೆ ಶಿಕ್ಷಕರನ್ನು ಗುರುತಿಸಿ ರೇಷನ್ ಕಿಟ್ ನೀಡುತ್ತಿರುವದು ಶ್ಲಾಘನೀಯ ಎಂದರು.
ದಾನಿಗಳಾದ ಎಂ ಆರ್ ಉಪಾಧ್ಯಾಯ ಅವರು ಮಾತನಾಡಿ ಯುವಾ ಬ್ರಿಗೇಡ್ ಬಗ್ಗೆ ತುಂಬಾ ನಂಬಿಕೆ ಇದ್ದು ಪ್ರತಿ ಕೆಲಸವು ಸಮರ್ಥವಾಗಿ ಮಾಡುತ್ತಿದ್ದಾರೆ ಹಾಗೆ ಎಲ್ಲಾ ಶಿಕ್ಷಕರು ಮುಂದಿನ ದಿನದಲ್ಲಿ ಮೂರನೆ ಅಲೆಯನ್ನು ಎದುರಿಸಲು ಸಮರ್ಥವಾಗಿ ನಿಲ್ಲಬೇಕು ಎಂದು ತಿಳಿಸಿದ್ದರು.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ಯುವಾ ಬ್ರಿಗೇಡ್ ತಾಲೂಕ ಸಂಚಾಲಕರಾದ ಸತೀಶ ಪಟಗಾರ ಕಾರ್ಯಕರ್ತರಾದ ಪ್ರಕಾಶ ನಾಯ್ಕ, ಬಬ್ಲು, ವಿಷ್ಣು ಪಟಗಾರ, ಅಣ್ಣಪ್ಪ ನಾಯ್ಕ ಬಗ್ಗೋಣ ಮತ್ತಿತರರು ಇದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ