December 22, 2024

Bhavana Tv

Its Your Channel

ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರ

ಭಟ್ಕಳ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸೇವಾಭಾರತಿ ಇವರ ಆಶ್ರಯದಲ್ಲಿ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯ ಹತ್ತಿರದ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ಮಂಗಳವಾರ ಬ್ರಹತ್ ರಕ್ತದಾನ ಶಿಬಿರ ನಡೆಯಿತು.

ಶಿಬಿರವನ್ನು ಶಾಸಕ ಸುನೀಲ ನಾಯ್ಕ ಉದ್ಘಾಟಿಸಿ ಮಾತನಾಡಿದರು. ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ವ್ಯಾಕ್ಷಿನ್ ಪಡೆಯುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ರಕ್ತದ ಅಭಾವ ಬರಬಾರದು ಎನ್ನುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಎರ್ಪಡಿಸಿರುವದು ಶ್ಲಾಘನೀಯ ಸಂಗತಿ ಎಂದರು. ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಮಾತನಾಡಿ ಪ್ರಧಾನಿ ಮೋದಿಯವರ ಅಧಿಕಾರದ ೭ನೇ ವರ್ಷದ ಸವಿನೆನಪಿಗಾಗಿ ರಕ್ತದಾನ ಶಿಬಿರವನ್ನು ಎರ್ಪಡಿಸಲಾಗಿದೆ ಎಂದರು.
ಈ ಸಂದರ್ಬದಲ್ಲಿ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾಧ್ಯಕ್ಷ ರವಿ ನಾಯ್ಕ ಜಾಲಿ, ತಾಲೂಕಾಧ್ಯಕ್ಷ ಲಕ್ಷಿöÃನಾರಾಯಣ ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಟದ ಸಂಚಾಲಕ ಸುರೇಶ ನಾಯ್ಕ, ರೈತ ಮೊರ್ಚಾದ ಪದ್ಮಯ್ಯ ನಾಯ್ಕ, ಮಹಿಳಾ ಮೊರ್ಚಾದ ಅಧ್ಯಕ್ಷೆ ಸವಿತಾ ಗೊಂಡ, ಮಂಜುನಾಥ ಮೊಗೇರ, ಚಂದ್ರು ಗೊಂಡ ಸೇರಿ ಇತರರು ಇದ್ದರು. ಒಟ್ಟು ೮೭ ಯೂನಿಟ್ ರಕ್ತವನ್ನು ಸಂಗ್ರಹಿಸಿ ಬ್ಲಡ್ ಬ್ಯಾಂಕ್ ನೀಡಲಾಯಿತು.
ವರದಿ ; ಮಂಜು ಮುಟ್ಟಳ್ಳಿ, ಭಟ್ಕಳ

error: