ಇಳಕಲ್ : ಹುನಗುಂದ ಹಾಗೂ ಇಳಕಲ್ ತಾಲ್ಲೂಕಿನ ಎಲ್ಲ ಬಂಧುಗಳಿಗೆ ಸಂಪೂರ್ಣ ಉಚಿತವಾಗಿ ಆಕ್ಸಿಜನ್ ಸೇವೆ ಉಳ್ಳ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದೇವೆ ಈ ಸೇವೆಯು ಕೇವಲ ಕೋವಿಡ್ ರೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ ಹೆರಿಗೆಯಿಂದ ಇಡಿದು ಎಲ್ಲ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಸ್.ಆರ್.ಎನ್.ಇ ಫೌಂಡೇಶನ್
ಸಂಸ್ಥಾಪಕರಾದ ಶ್ರೀ ಎಸ್. ಆರ್. ನವಲಿ ಹಿರೇಮಠರವರು ಹೇಳಿದರು.
ನಗರದ ಎಸ್.ಆರ್.ಎನ್.ಇ ಫೌಂಡೇಶನ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಎಸ್.ಆರ್.ಎನ್.ಇ ಫೌಂಡೇಶನ್ ವತಿಯಿಂದ ಹುನಗುಂದ ಮತಕ್ಷೇತ್ರದ ಜನತೆಗೆ ಸುಮಾರು ೧ ಲಕ್ಷ ಮಾಸ್ಕ್, ೨೫ ಸಾವಿರ ಆಹಾರ ಸಾಮಗ್ರಿಗಳ ಕಿಟ್ ಮತ್ತು ಮುಸ್ಲಿಂ ಬಾಂಧವರಿಗೆ ೬ ಸಾವಿರ ರಮಜಾನ ಕಿಟ್ ಗಳನ್ನು ವಿತರಿಸಲಾಗಿತ್ತು.
ಅದೇ ರೀತಿ ಎರಡನೆಯ ಅಲೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಇಳಕಲ್ ನಗರದ ಎಲ್ಲ ಸಮಾಜದ ಕಡುಬಡತನದಲ್ಲಿರುವ ಸುಮಾರು ೫ ಸಾವಿರ ಜನರಿಗೆ ನನ್ನ ಖಾತೆಯಿಂದ ನೇರವಾಗಿ ಅವರ ಖಾತೆ ೫೦೦ ರೂ,ಗಳು ಜಮಾ ಮಾಡಲಾಗುತ್ತಿದೆ. ಈಗಾಗಲೇ ೨ ಸಾವಿರಕ್ಕೂ ಹೆಚ್ಚು ಜನರಿಗೆ ಜಮಾ ಮಾಡಲಾಗಿದೆ. ಮತ್ತು ತಾಲ್ಲೂಕಿನ ಕೋವಿಡ್ ವಾರಿಯರ್ಸಗಳಾದ ೩೭೦ ಆಶಾ ಕಾರ್ಯಕರ್ತರಿಗೆ ಮತ್ತು ಪೌರಕಾರ್ಮಿಕರಿಗೆ ಬಟ್ಟೆ, ಮಾಸ್ಕ, ಸ್ಯಾನಿಟೈಜರ್, ಹಾಗೂ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ.
ಹುನಗುಂದ ನಗರದಲ್ಲಿ ಸರಕಾರಿ ಆಸ್ಪತ್ರೆಗೆ ಅವಶ್ಯವಿರುವ ಸುಮಾರು ೩ ಲಕ್ಷ ರೂ,ಗಳ ವೈದ್ಯಕೀಯ ಸಾಮಗ್ರಿಗಳನ್ನು ಮತ್ತು ಹುನಗುಂದ ನಗರದ ಪೋಲಿಸ್ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ಗಳನ್ನು ನೀಡಲಾಗಿದೆ.
ಎಸ್.ಆರ್.ಎನ್.ಇ ಫೌಂಡೇಶನ್ ತೆಕೆಯಲ್ಲಿರುವ ಗುಡೂರ, ಚಿಕ್ಕನಾಳ, ವಡಗೇರಿ, ಕಂದಗಲ್ಲ, ಕರಡಿ, ಕೂಡಲಸಂಗಮ, ಗಂಜಿಹಾಳ, ಹಿರೇಮಳಗಾವಿ ಗ್ರಾಮ ಪಂಚಾಯತಿಗಳ ಎಲ್ಲ ಸಿಬ್ಬಂದಿಗಳಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಗೌರವಿಸಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಗಿದೆ.
ಮತಕ್ಷೇತ್ರದ ಎಲ್ಲ ದೇವಸ್ಥಾನಗಳ ಆರ್ಚಕರಿಗೆ ಮತ್ತು ಮಸೀದಿಗಳ ಪೇಶ್ಮಾ ಮತ್ತು ಹಾಸೀಫ್ ಗಳಿಗೆ ತಲಾ ೨ ಸಾವಿರ ರೂ,ಗಳನ್ನು ನೀಡಲಾಗುತ್ತಿದೆ ಎಂದು ತಮ್ಮ ಎಲ್ಲ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ತಿಳಿಸಿದರು.
ಲಿಮ್ರಾ ವೇಲ್ಫೇರ ಅಸೋಶೇಷನ್ ಅಧ್ಯಕ್ಷ ರಜಾಕ ತಟಗಾರ ಮಾತನಾಡಿ, ತಾಲ್ಲೂಕಿನಾದ್ಯಾಂತ ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವ ಜನತೆಯ ನೆರವಿಗೆ ಧಾವಿಸಬೇಕಾದ ಜನಪ್ರತಿನಿಧಿಗಳು ತಮ್ಮ ತಮ್ಮ ಕಚ್ಚಾಟದಲ್ಲಿ ನಿರತರಾಗಿದ್ದಾರೆ. ಸದಾ ಜನರ ಕಷ್ಟಗಳಿಗೆ ಸ್ಪಂದಿಸುವ, ಸದ್ದಿಲದೇ ಸೇವೆಗೈಯುತ್ತಿರುವ ಜನರ ಸೇವಕನೆ ನಿಜವಾದ ನಾಯಕ ಅವರೇ ನಮ್ಮ ನವಲಿಹಿರೇಮಠರವರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಿಗೆ, ವೃತ್ತಿಭೂಮಿ ಕಲಾವಿದರಿಗೆ, ಪತ್ರಿಕಾ ವಿತರಕರಿಗೆ, ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ, ಟೇಲರ ಕಾರ್ಮಿಕರಿಗೆ, ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಲಿಮ್ರಾ ವೇಲ್ಫೇರ ಅಸೋಶೇನನ ಅಧ್ಯಕ್ಷ ರಜಾಕ್ ತಟಗಾರ, ಎಸ್.ಆರ್.ಎನ್.ಇ ಫೌಂಡೇಶನ್ ಹಿರಿಯರಾದ ಮಹಾಂತೇಶ ಅಂಗಡಿ, ಅಶೋಕ ತಳಗಡಿ, ಪ್ರಶಾಂತ ಅರಳಿಕಟ್ಟಿ ನಗರಸಭೆ ಸದಸ್ಯೆ ವೀಣಾ ಅರಳಿಕಟ್ಟಿ, ವಿರುಪಾಕ್ಷಪ್ಪ ಗೂಳಿ, ನಾಗರಾಜ ನಗರಿ, ತಿಪ್ಪಣ್ಣ ಕ್ವಾಟಗುಂಡಿ, ತಿಪ್ಪಣ್ಣ ಗೆಜ್ಜಲಗಟ್ಟಿ, ಬಸಮ್ಮ ಕರ್ಲಿ, ಗಂಗಾಧರ ಕುರಗೋಡಿ, ನಾಗರಾಜ ಹುನಕುಂಟಿ, ನವೀನ ದೇವದುರ್ಗ, ನಾಗರಾಜ ಕುಲಕರ್ಣಿ ಮತ್ತಿತರರು ಇದ್ದರು.
ವರದಿ : ಮಾಂತೇಶ್ ಕುರಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ