December 21, 2024

Bhavana Tv

Its Your Channel

ಬ್ರಾಹ್ಮಣ ಧರ್ಮಕ್ಕೆ ಅವಹೇಳನ ಖಂಡನೀಯ

ಇಳಕಲ್: ಕನ್ನಡ ಚಿತ್ರರಂಗದ ಯುವನಟ ಚೇತನ್ ಇತ್ತೀಚೆಗೆ ಇಡೀ ಬ್ರಾಹ್ಮಣ ಸಮುದಾಯವನ್ನು ಭಯೋತ್ಪಾದಕರು ಇತ್ಯಾದಿ ಕಟು ಶಬ್ದಗಳಿಂದ ಅವಮಾನಿಸಿ, ಜಾತಿ ನಿಂದನೆ ಮಾಡಿರುವದನ್ನು ಇಳಕಲ್ ಬ್ರಾಹ್ಮಣ ಸಮಾಜ ತೀವ್ರವಾಗಿ ಖಂಡಿಸುತ್ತದೆ.
ನಗರದ ಬ್ರಾಹ್ಮಣರು ಸೇರಿಕೊಂಡು ಇಳಕಲ್ ತಹಶೀಲ್ದಾರ ಕಚೇರಿಗೆ ತೆರಳಿ ಅಲ್ಲಿ ರಾಜ್ಯಪಾಲರ ಹೆಸರಿನಲ್ಲಿ ಬರೆದ ಮನವಿ ಪತ್ರವನ್ನು ಓದಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಸಮಾಜದ ಅಧ್ಯಕ್ಷ ಪಾಂಡುರAಗ ಕುಲಕರ್ಣಿ ಅರ್ಪಿಸಿದರು.
ಬ್ರಾಹ್ಮಣ ಸಮಾಜ ಬಾಂಧವರು ಸರಕಾರದಿಂದ ಯಾವುದೇ ವಿಶೇಷ ಸೌಲಭ್ಯ, ಅನುಧಾನಗಳಿಂದ ವಂಚಿತರಾಗಿ ಸ್ವಾಭಿಮಾನದಿಂದ ಶಾಂತಿಯುತವಾಗಿ ಬಾಳುವ ಬ್ರಾಹ್ಮಣ ಧರ್ಮಕ್ಕೆ ಭಯೋತ್ಪಾದನೆ ಎಂಬ ಕಟು ಶಬ್ದಗಳ ಪ್ರಯೋಗ ಮಾಡಿ ಇಂತಹ ಕೀಳು ಮನಸ್ಸಿನ ನಟ ಚೇತನ್‌ರವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಇಂತಹ ಹೇಳಿಕೆ ನೀಡಿದ ನಟ ಚೇತನ್ ಅವರನ್ನು ಬೆಂಬಲಿಸುವ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿ ಇಡುವುದರ ಜೊತೆಗೆ ಚೇತನ್ ಅವರನ್ನು ತಕ್ಷಣವೇ ಬಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಸಮಾಜದ ಅಧ್ಯಕ್ಷ ಪಾಂಡುರAಗ ಕುಲಕರ್ಣಿ, ನಾರಾಯಣಾಚಾರ್ ಪೂಜಾರ, ಕಮಲಾಕರ್ ದೇಶಪಾಂಡೆ, ಗುರುರಾಜ ಗೊಂಬಿ, ಸುಧಿರ ಪಾಟೀಲ, ಪ್ರಕಾಶ ಗೊಂಬಿ, ಗುರುರಾಜ ಪೂಜಾರ, ರಾಜು ಕುಲಕರ್ಣಿ, ವೆಂಕಟೇಶ ಪೂಜಾರ, ವಿಜಯ ಕಾರ್ಕಳ, ಗಿರಿಧರ ದೇಸಾಯಿ ಮೊಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ವಿನೋದ ಬಾರಿಗಿಡದ

error: