May 1, 2024

Bhavana Tv

Its Your Channel

ಇಂಧನ ಬೆಲೆ ಏರಿಕೆ ವಿರೋಧಿಸಿ ಭಟ್ಕಳದಲ್ಲಿ ಜೆಡಿಎಸ್ ನಿಂದ ಪ್ರತಿಭಟನೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುವ ಬರದಲ್ಲಿ ಜೆಡಿಎಸ್ ಕಾರ್ಯಕರ್ತನಿಂದ ಜೈಕಾರ

ಭಟ್ಕಳ: ಪೆಟ್ರೋಲ್ ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಭಟ್ಕಳ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವಿಚಂದ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ತಾಲೂಕಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಪೆಟ್ರೋಲ್ ಡೀಸೆಲ್ ದರ ನೂರು ರೂಪಾಯಿಗಿಂತಲೂ ಹೆಚ್ಚಾಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡಲು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ತೈಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ ಕೇಂದ್ರ ಸರ್ಕಾರದ ಅಚ್ಚೆ ದಿನ್ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ಸರ್ಕಾರ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಬೆಲೆ ಏರಿಕೆಯಿಂದ ಜನರು ಮತ್ತಷ್ಟು ತೊಂದರೆ ಅನುಭವಿಸುವ ಪೂರ್ವದಲ್ಲಿ ಕೂಡಲೇ ಬೆಲೆ ಏರಿಕೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ

ನಂತರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪಾಂಡು ನಾಯ್ಕ ಮುರುಡೇಶ್ವರ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು ೭ ವರ್ಷ ಕಳೆದರೂ ನದಿ ಜೋಡನೆ ಲೋಕಪಾಲ್ ಮಸೂದೆ ಜಾರಿ’ ರೈತರ ಸಾಲಮನ್ನಾ ಸೇರಿದಂತೆ ಯಾವ ಭರವಸೆಯೂ ಈಡೇರಿಲ್ಲ ದೇಶದಲ್ಲಿ ಭ್ರಷ್ಟಾಚಾರ ಸಮಸ್ಯೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ ಸರ್ಕಾರಕ್ಕೆ ಕಿವಿ ಕಣ್ಣು ೨ಇಲ್ಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಇದೆ ವೇಳೆ ಒಂದು ಹಾಸ್ಯಾಸ್ಪದ ಘಟನೆ ನಡೆದಿದ್ದು ಜೆಡಿಎಸ್ ತಾಲೂಕಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುವ ವೇಳೆ ಜೆ.ಡಿ.ಎಸ್ ಕಾರ್ಯಕರ್ತನೊರ್ವ ಜೈಕಾರ ಕೂಗಿದ್ದು. ತಕ್ಷಣಕ್ಕೆ ಎಲ್ಲರ ಘಮನ ಒಮ್ಮೆ ಜೈಕಾರ ಕೂಗಿದ ಕಾರ್ಯತನ ಕಡೆ ಹೊಗಿದ್ದು ಇದರಿಂದ ಕೆಲ ಕಾಲ ಮುಜುಗರ ಉಂಟಾದ ಸನ್ನಿವೇಶ ನಡೆಯಿತು

error: