May 6, 2024

Bhavana Tv

Its Your Channel

ಭಟ್ಕಳ ತಾಲೂಕ ಪಂಚಾಯತ ಸಾಮಾನ್ಯ ಸಭೆ ಆಡಳಿತಾಧಿಕಾರಿ ವಿರೇಂದ್ರ ಬಾಡ್ಕರ ರವರ ಅಧ್ಯಕ್ಷತೆಯಲ್ಲಿ ಜರುಗಿತು

ಭಟ್ಕಳ: ಭಟ್ಕಳ ಬಸ್ ನಿಲ್ದಾಣ ಹಾಗೂ ಮುರ್ಡೇಶ್ವರ ಬಸ್ ನಿಲ್ದಾಣದ ಎದುರಿಗೆ ನೀರು ನಿಂತು ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಕುರಿತು ಮಾಧ್ಯಮಗಳು ನ್ಯೂನ್ಯತೆಯನ್ನು ಗುರುತಿಸಿ ಪ್ರಚಾರ ನೀಡಿದ್ದು ಇದು ವಾಸ್ತವ ವಿಚಾರವಾಗಿದ್ದು, ಕೂಡಲೇ ಅದನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಾಲೂಕ ಪಂಚಾಯತ ಆಡಳಿತಾಧಿಕಾರಿ ವಿರೇಂದ್ರ ಬಾಡ್ಕರ ರವರು ಸೂಚಿಸಿದರು.
ಅವರು ಭಟ್ಕಳ ತಾಲೂಕ ಪಂಚಾಯತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಇಲಾಖೆಯ ಚರ್ಚೆಯ ಮೇಲೆ ಮಾತನಾಡುತ್ತ ತಿಳಿಸಿದರು.
ಮುರ್ಡೇಶ್ವರದಲ್ಲಿ ರೂ. ೫೦.೦೦ ಲಕ್ಷ ಅಂದಾಜು ಮೊತ್ತದಲ್ಲಿ ಬಸ್ ನಿಲ್ದಾಣ ನವೀಕರಣಗೊಂಡಿದ್ದರೂ, ಎದುರಿನ ಆವರಣದಲ್ಲಿ ಅಲ್ಲಲ್ಲಿ ನೀರು ತುಂಬಿರುತ್ತದೆ. ಭಟ್ಕಳ ಹೈಟೆಕ್ ಬಸ್ ನಿಲ್ದಾಣ ಎಂದು ಕರೆಸಿಕೊಂಡರೂ ಎದುರಿನ ಆವರಣ ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರುಮಯವಾಗಿದೆ. ಈ ಕುರಿತು ಘಟಕ ವ್ಯವಸ್ಥಾಪಕರು, ಮುರ್ತುರ್ಜಿ ವಹಿಸಿ ಮೇಲಾಧಿಕಾರಿಗಳಿಗೆ ಬರೆದುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕೆAದು ತಿಳಿಸಿದರು.
ಕೃಷಿ ಇಲಾಖೆಯವರು ರಸಗೊಬ್ಬರ, ಕೀಟನಾಶಕ ಸಾಕಷ್ಟು ಸಂಗ್ರಹಿಸಿಟ್ಟುಕೊಳ್ಳಬೇಕು. ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿರುವುದರಿಂದ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿ ಜಾಗೃತರಿರಬೇಕು. ಫ್ರೂಟ್ಸ್ ತಂತ್ರಾAಶದಲ್ಲಿ ರೈತರ ಪಹಣಿ ದಾಖಲಾತಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಆದರ್ಶ ಗ್ರಾಮ ಯೋಜನೆಯಡಿ ಮಾರುಕೇರಿಯನ್ನು ಆಯ್ಕೆ ಮಾಡಿಕೊಂಡಿದ್ದು, ತಾಲೂಕಿನ ಮಾದರಿ ಅಂಗನವಾಡಿಗೆ ಅರವಕ್ಕಿ ಹಾಗೂ ಗರ್ಡಿಗದ್ದೆ ಆಯ್ಕೆಯಾಗಿದ್ದು ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುವುದರ ಜೊತೆಗೆ ಆದ್ಯತೆ ಮೇರೆಗೆ ಕಾರ್ಯ ನಿರ್ವಹಿಸಲು ಸಮಾಜ ಕಲ್ಯಾಣ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.
ತಾಲೂಕ ಪಂಚಾಯತಿಯ ವಿವಿಧ ಕ್ರಿಯಾ ಯೋಜನೆಗಳಿಗೆ ಸಭೆ ಅನುಮೋದನೆ ನೀಡಿತು. ಶಿಶು ಅಭಿವೃದ್ಧಿ ಇಲಾಖೆಯ ನೂತನ ವಾಹನ ಖರೀದಿಗೆ ಸಭೆ ಅನುಮೋದನೆ ನೀಡಿತು.
ಸಭೆಯಲ್ಲಿ ಆರೋಗ್ಯ, ಪಶು ವೈದ್ಯಕೀಯ, ಶಿಕ್ಷಣ, ಹೆಸ್ಕಾಂ, ತೋಟಗಾರಿಕೆ, ಅರಣ್ಯ, ಹಿಂದುಳಿದ ವರ್ಗ, ಲೋಕೋಪಯೋಗಿ, ಕಂದಾಯ ಇಲಾಖೆಗಳ ಕಾರ್ಯಕ್ರಮಗಳ ಮೇಲೆ ಚರ್ಚೆ ನಡೆಸಲಾಯಿತು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಭಾಕರ ಚಿಕ್ಕನ್ಮನೆ ರವರು ವೇದಿಕೆಯಲ್ಲಿದ್ದು ಕಲಾಪಕ್ಕೆ ಸಹಕರಿಸಿದರು. ಹೇಮಾ ನಾಯ್ಕ ಮಾಸಿಕ ಲೆಕ್ಕ ಓದಿ ಹೇಳಿ ಅನುಮೋದನೆ ಪಡೆದರು. ಕರಿಯಪ್ಪ ಎಂ. ನಾಯ್ಕ ಸ್ವಾಗತಿಸಿದರು. ಕೊನೆಯಲ್ಲಿ ವ್ಯವಸ್ಥಾಪಕಿ ಲತಾ ನಾಯ್ಕ ವಂದಿಸಿದರು.

error: