
ಭಟ್ಕಳ ಕ್ರಿಯಾಶೀಲ ಗೆಳೆಯರ ಸಂಘ ಇದರ ವತಿಯಿಂದ ಮನೆಗೊಂದು ಸಸಿ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ರವಿವಾರ ಬೆಳಿಗ್ಗೆ ಇಲ್ಲಿನ ಬಂದರ ರಸ್ತೆಯಲ್ಲಿರುವ ಪುರಸಭೆಯ ಸರದಾರ ವಲ್ಲಭಬಾಯಿ ಪಟೇಲ ಉದ್ಯಾವನದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,

ಈ ಸಂದರ್ಭದಲ್ಲಿ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮಾತನಾಡಿ ನಮ್ಮ ಸಂಘದಿAದ ಪರಿಸರವನ್ನು ಕಾಪಾಡುವ ಹಿತದೃಷ್ಟಿಯಿಂದ ಉದ್ಯಾನವನ ಹಾಗೂ ಶಾಲಾ ಆವರಣದಲ್ಲಿ ಗಿಡವನ್ನು ನೆಡುವುದರ ಮೂಲಕ ಚಾಲನೆ ನೀಡಿದ್ದೇವೆ. ತಾಲೂಕಿನಲ್ಲಿ ಪರಿಸರಕ್ಕೆ ಹಾನಿಯುಂಟಾಗುವ ಯಾವುದೇ ಕಾರ್ಯ ನಡೆದರೂ ಅದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಸಂಘ ತಾಲೂಕಿನ ಆಡಳಿತದ ಗಮನಕ್ಕೆ ತಂದು ಪರಿಸರವನ್ನು ಉಳಿಸುವ ಕೆಲಸ ಮಾಡಲಿದ್ದೇವೆ ಎಂದರಲ್ಲದೇ ಪರಿಸರದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತೆ ಉಂಟಾದಾಗ ಮಾತ್ರ ನಾವು ನಮ್ಮ ಪರಿಸರವನ್ನು ಉಳಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿ ಉಮೇಶ ಮಡಿವಾಳ, ಸೋನಾರಕೇರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ ನಾಯ್ಕ , ಸದಸ್ಯರಾದ ಭವಾನಿಶಂಕರ ನಾಯ್ಕ, ದೀಪಕ ನಾಯ್ಕ, ಪಾಂಡುರAಗ ನಾಯ್ಕ, ರಮೇಶ ಖಾರ್ವಿ, ವೆಂಕಟೇಶ ಮೊಗೇರ, ಸಂಜಯ ಶೇಟ, ಮನೋಜ್ ನಾಯ್ಕ, ಜಗದೀಶ ನಾಯ್ಕ, ಈಶ್ವರ ನಾಯ್ಕ,ರವಿ ಗವಾಳಿ,ಶ್ರೀನಿವಾಸ ನಾಯ್ಕ,ಪವನ್, ಅರುಣ್ ನಾಯ್ಕ, ಮಣಿ ಪೂಜಾರಿ ಹಾಗೂ ಪುರಸಭೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು, ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸ್ವಾಗತಿಸಿ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ