December 22, 2024

Bhavana Tv

Its Your Channel

ಕುಮಟಾ ತಾಲೂಕಿನ ೧೧ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕುಮಟಾ: ತಾಲೂಕಿನಲ್ಲಿ ಮೊದಲ ದಿನದ ಎಸ್.ಎಸ್.ಎಲ್.ಸಿ ೩ ವಿಷಯದ ಪರೀಕ್ಷೆಯು ವಿವಿಧ ೧೧ ಕೇಂದ್ರಗಳಲ್ಲಿ ಶಾಂತಿಯುತವಾಗಿ, ಶಿಸ್ತಿನಿಂದ ಸೋಮವಾರ ಮುಕ್ತಾಯಗೊಂಡಿತು.
೨೧೭೯ ವಿದ್ಯಾರ್ಥಿಗಳಲ್ಲಿ ೨೧೭೭ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ಬರೆದಿದ್ದು, ೨ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕೋವಿಡ್ ಕಾರಣದಿಂದ ರಾಜ್ಯ ಸರ್ಕಾರ ಪ್ರತಿ ಪರೀಕ್ಷೆಗೆ ೧ ಘಂಟೆ ಸಿಮೀತಿಗೊಳಿಸಿ, ಪ್ರತಿ ಪ್ರಶ್ನೆ ಪತ್ರಿಕೆಯನ್ನು ಬಹು ಆಯ್ಕೆ ಮಾದರಿಯದ್ದಾಗಿಸಿ, ಪ್ರತಿ ಡೆಸ್ಕ್ಗೆ ಓರ್ವ ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಪರೀಕ್ಷಾ ಅವಧಿ ೩ ಘಂಟೆಗಳ ಅವಧಿಯಾದ್ದರಿಂದ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಿತಲ್ಲದೇ, ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಪರೀಕ್ಷೆಗೆ ಹಾಜರಾದರು. ಗ್ರಾಮೀಣ ಭಾಗದ ೧೮ ಮಾರ್ಗಗಳಿಗೆ ಕೆ.ಎಸ್.ಆರ್.ಟಿ.ಸಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ಅತ್ಯಂತ ಶಿಸ್ತುಬದ್ಧವಾಗಿ ನಡೆದಿದೆ. ಓರ್ವ ಪುನರಾವರ್ತಿತ, ಓರ್ವ ಈ ವರ್ಷದ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪಾಲಕರ, ವಿದ್ಯಾರ್ಥಿಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಸಹಕರಿಸಿದ್ದಾರೆ. ಪ್ರತಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆಯನ್ನು ಎದುರಿಸಿದ್ದಾರೆ. ಜು. ೨೨ ರಂದು ಭಾಷಾ ವಿಷಯದ ಪರೀಕ್ಷೆ ನಡೆಯಲಿದೆ. ಕುಮಟಾ ತಾಲೂಕಿನಲ್ಲಿ ಮಾದರಿ ರೀತಿಯಲ್ಲಿ ಪರೀಕ್ಷೆ ನಡೆಯಲು ಶಿಕ್ಷಣ ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳ ಸಹಕಾರ ಕಾರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ತಿಳಿಸಿದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿಗಳು ಪ್ರತಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕಾನಿಂಗ್‌ನಿAದ ಉಷ್ಣತೆ ತಪಾಸಣೆ ನಡೆಸಿ, ಕೊಠಡಿ ಒಳಗಡೆ ಕಳುಹಿಸಿದರು. ಅಹಿತಕರ ಘಟನೆಗಳು ಸಂಭವಿಸಿದAತೆ ಸಿ.ಪಿ.ಐ ಶಿವಪ್ರಕಾಶ ನಾಯ್ಕ ಮಾರ್ಗದರ್ಶನದಲ್ಲಿ ಪಿ.ಎಸ್.ಐಗಳಾದ ಆನಂದಮೂರ್ತಿ, ರವಿ ಗುಡ್ಡಿ ಸುದಾ ಹರಿಕಾಂತ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಿದ್ದರು.ಶಾಂತಿಕಾ, ಪ್ರಗತಿ ವಿದ್ಯಾಲಯದ ವಿದ್ಯಾರ್ಥಿನಿ ಮಾತನಾಡಿ ಮೊದಲ ಬಾರಿಗೆ ಓ.ಎಂ.ಆರ್‌ನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿರುವುದು ಹೊಸ ಅನುಭವ ನೀಡಿತು. ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅತ್ಯಂತ ಶಿಸ್ತಿನಿಂದ ಪರೀಕ್ಷೆ ನಡೆಸಿದ್ದಾರೆ.

ವರದಿ ನಟರಾಜ ಗದ್ದೆಮನೆ

error: