ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪ್ರತಿ ವರ್ಷದಂತೆ ನಡೆಯುವ ಶ್ರೀರಾಮನವಮಿ, ಶರಾವತಿ ಕುಂಭ, ಸಂಸ್ಕೃತಿಕುAಭ, ಮಲೆನಾಡ ಉತ್ಸವ-೨೦೨೦, ಶ್ರೀನಿವಾಸ ಕಲ್ಯಾಣ್ಯೋತ್ಸವ, ಪುಷ್ಪ ರಥೋತ್ಸವ, ಬ್ರಹ್ಮ ರಥೋತ್ಸವ ಈ ಕಾರ್ಯಕ್ರಮವು ಇದೇ ಬರುವ ಏಪ್ರಿಲ್ ೨ರಿಂದ ೮ರವರೆಗೆ ಅಂದರೆ ರಾಮನವಮಿಯಿಂದ ಹನುಮಜಯಂತಿಯವರೆಗೆ ನಡೆಸಲು ನಿರ್ಧರಿಸಲಾಗಿತ್ತು ಆದರೆ, ದೇಶದಾದ್ಯಂತ ಕೋವಿಡ್-೧೯ (ಕರೋನಾ ವೈರಸ್) ಮಹಾಮಾರಿ ರೋಗವು ವಿಶೇಷವಾಗಿ ಹಬ್ಬುತ್ತಿರುವುದರಿಂದ ಉತ್ಸವದ ಸಮಯದಲ್ಲಿ ಸಹಸ್ರಾರು ಭಕ್ತರು ಸೇರುವ ಕಾರಣದಿಂದ, ಈ ವೈರಸ್‌ನಿಂದ ತೊಂದರೆ ಉಂಟಾಗಬಹುದೆAದು ಮುಂಜಾಗೃತ ಕ್ರಮವಾಗಿ ಈ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಕೇವಲ ರಥೋತ್ಸವ ಕಾರ್ಯಕ್ರಮವನ್ನು ಮಾತ್ರ ಅತಿ ಸರಳವಾಗಿ ಶಾಸ್ತೊçÃಕ್ತವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಕಾರಣ ಶ್ರೀಕ್ಷೇತ್ರದ ಸಮಸ್ತ ಭಕ್ತರು ಹಾಗೂ ಕಲಾವಿದರು ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ,
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.