April 11, 2024

Bhavana Tv

Its Your Channel

ಪ್ರಾಥಮಿಕ & ಪ್ರೌಡ ಶಾಲೆಗಳಿಗೆ ನಿಗದಿಯಾಗಿದ್ದ ೭&೮&೯ ತರಗತಿಗಳ ಪರಿಕ್ಷಾ ವೇಳಾಪಟ್ಟಿಯನ್ನು ಏಪ್ರಿಲ್ ೩೦ರ ನಂತರ ಪ್ರಕಟಿಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚೀವರಾದ ಸುರೇಶಕುಮಾರ್ ಮಾಹಿತಿ ನೀಡಿದ್ದಾರೆ.

ರಾಜ್ಯದೆಲ್ಲಡೆ ಕರೋನಾ ಸೊಂಕಿನ ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಮುಖ್ಯಮಂತ್ರಿಗಳೆ ೧ ವಾರಗಳ ಕಾಲ ಮಾಲ್, ಚಿತ್ರಮಂದಿರ, ಸಭೆ ಸಮಾರಂಭ ರದ್ದು ಪಡಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಅಲ್ಲದೆ ಮಕ್ಕಳ ಬಗ್ಗೆ ಜಾಗೃತಿ ವಹಿಸಿದ್ದು ೧ ರಿಂದ ೬ ನೇ ತರಗತಿ ಒಳಗಿನ ಎಲ್ಲರಿಗೂ ಪರಿಕ್ಷೆ ರದ್ದುಪಡಿಸಿ ರಜೆ ಘೊಷಿಸಲಾಗಿದೆ. ೭,೮ ಮತ್ತು ೯ ನೇ ತರಗತಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರಿಕ್ಷಾ ಸಿದ್ದತಾ ರಜೆ ನೀಡಲಾಗಿದ್ದು ಮಾರ್ಚ ೩೦ರ ನಂತರ ನೂತನ ವೇಳಾಪಟ್ಟಿ ಪ್ರಕಟಿಸಲಾಗುವುದು ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲಕರು ಗಮನಿಸಬೇಕು ಎಂದು ಶಿಕ್ಷಣ ಸಚೀವರು ಮಾಹಿತಿ ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಪರಿಕ್ಷೆ ನಿಗದಿಯಂತೆ ನಡೆಯಲಿದೆ.

error: