ಹೊನ್ನಾವರ ; ಅಖಿಲ ದೈವಜ್ಞ ಬ್ರಾಹ್ಮಣ ಮಠ ಶ್ರೀ ಕ್ಷೇತ್ರ ಕರ್ಕಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಬೆಂಗಳೂರಿನ ಉದ್ಯಮಿ ಮೋಹನ್ ಶೇಟ್ ಇವರು ಅಗಲಿದ ಹಿನ್ನಲೆ ಹೊನ್ನಾವರ ಪಟ್ಟಣದ ವಿಠೋಬ ರುಕ್ಮಾಯಿ ದೇವಾಲಯದ ಸಭಾಭವನದಲ್ಲಿ ಶನಿವಾರ ಸಮಾಜ ಭಾಂದವರು ಅಂಗಡಿ ಮುಂಗಟ್ಟು ಬಂದ್ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು.
ಅಗಲಿಕೆ,
ದಿವಂಗತ ಮೋಹನ್ ಶೇಟ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ,ಪುಷ್ಪ ನಮನ ಸಲ್ಲಿಸಿ ಮೌನಾಚರಿಸಿದರು. ನಂತರ ವಿಠೋಬ ರುಕ್ಮಾಯಿ ದೇವಾಲಯದ ಅಧ್ಯಕ್ಷ ಮಾಧವ ಶೇಟ್ ಮಾತನಾಡಿ ದಿ.ಮೋಹನ ಶೇಟ್ ಅವರು ಸಮಾಜಕ್ಕಾಗಿ ತುಂಬಾ ತ್ಯಾಗ ಮಾಡಿ ಸಮಾಜಕ್ಕೆ ಗುರುವಿರಬೇಕು, ಗುರುಪೀಠವಿರಬೇಕು ಎಂದು ಅಪಾರ ಶ್ರಮಿಸಿ ಕಾರ್ಯಗತಗೊಳಿಸಿದ್ದರು. ಅವರ ಕಾರ್ಯ ನಮಗೆಲ್ಲಾ ಮಾರ್ಗದರ್ಶನವಾಗಿದೆ. ಅವರ ಸೇವೆಗೆ ನಾವು ಚಿರಋಣಿಯಾಗಿದ್ದೇವೆ ಎಂದರು.
ತಾಲೂಕಾ ದೈವಜ್ಞ ವಾಹಿನಿಯ ಅಧ್ಯಕ್ಷ ಕೃಷ್ಣಕುಮಾರ್ ಶೇಟ್ ಮಾತನಾಡಿ ಮೋಹನ ಶೇಟ್ ಅವರು ನಮಗೆ ದಾರಿದೀಪ ಹಚ್ಚಿಕೊಟ್ಟಿದ್ದಾರೆ. ಸಂಘಟನೆ ಎಂದರೆ ಎನೆನ್ನುವ ಶಕ್ತಿಯನ್ನು ತೋರಿಸಿ ಗುರು,ಮಠ ಸ್ಥಾಪಿಸಲು ಕಾರಣರಾಗಿದ್ದಾರೆ. ಅಸಂಘಟಿತ ಸಮಾಜ ಒಗ್ಗೂಡಿಸಿ ನಮ್ಮೆಲ್ಲರ ಶಕ್ತಿಯಾಗಿದ್ದರು. ನಮ್ಮ ಸಮಾಜದ ಜೊತೆ ಎಲ್ಲಾ ಸಮಾಜದವರು ಒಂದಾಗಲು ಶ್ರಮಿಸಿದರು. ಅವರ ಆದರ್ಶವನ್ನು ನಾವು ಮುಂದುವರೆಸಿ ಸಮಾಜಕ್ಕೆ ದೇೆಶಕ್ಕೆ ಕಿರ್ತಿ ತರುವ ಕೆಲಸ ಮಾಡೋಣ ಎಂದರು.
ಶರಾಫ್ ಸಂಘದ ಅಧ್ಯಕ್ಷ ಉದಯ ಶೇಟ್ ಮಾತನಾಡಿ ಸಮಾಜದ ಅನೇಕ ವರ್ಷದ ಕನಸು ನನಸಾಗಿಸಲು ಶ್ರಮಿಸಿದ ನಾಯಕರಾಗಿದ್ದಾರೆ. ಯಾವುದೇ ಅಡೆ ತಡೆಗಳನ್ನು ಎದುರಿಸಿ ಸಮಾಜವನ್ನು ಒಗ್ಗೂಡಿಸಿದ ಕಿರ್ತಿ ಇವರದ್ದಾಗಿತ್ತು ಎಂದರು.
ದೈವಜ್ಞ ಯುವಕ ಸಂಘದ ಅಧ್ಯಕ್ಷ ದಿನೇಶ್ ಶಂಕರ ಶೇಟ್ ಮಾತನಾಡಿ ಸಮಾಜಕ್ಕೆ ಕಳೆದ ನಲವತ್ತು ವರ್ಷಗಳ ಹಿಂದೆ ಗುರುಪೀಠವಾಗಬೇಕೆಂದು ಶ್ರಮಿಸಿದ ಫಲ ಅನೇಕ ಕಾರ್ಯಗಳು ಸುಲಭವಾಗಿ ಆಗುತ್ತಿದೆ. ಅವರ ಆದರ್ಶವನ್ನು ನಾವು ಪಾಲಿಸೋಣ ಎಂದು ಕರೆ ನಿಡಿದರು.
ಸತ್ಯನಾರಾಯಣ ಪಿ ಶೇಟ್ ಶ್ರದ್ದಾಂಜಲಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಸಭೆಯಲ್ಲಿ ತಾಲೂಕಾ ಮಾತೃವಾಹಿನಿ ಅಧ್ಯಕ್ಷೆ ಉರ್ಮಿಳಾ ಶೇಟ್, ಸುವರ್ಣ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಂಜುನಾಥ ಪಿ ಶೇಟ್, ದೀಪಕ ಶೇಟ್, ಪ್ರಶಾಂತ ಶೇಟ್ ಇತರರು ಉಪಸ್ಥಿತರಿದ್ದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ